ಬೆಂಗಳೂರು: ಸಚಿವ ಡಾ. ಕೆ.ಸುಧಾಕರ್ ಅವರ ಸದಾಶಿವನಗರದ ಮನೆ ಮುಂದೆಯೇ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.
ಸಚಿವ ಸುಧಾಕರ್ ಅವರ ಮನೆಯ ಮುಂದೆ, ಗನ್ ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.
ನಿನ್ನೆ ಟೀ ಮಾರುವ ಅಂಗವಿಕಲನ ಮೇಲೆ ತಿಮ್ಮಯ್ಯ ಹಲ್ಲೆ ನಡೆಸಿದ್ದಾನೆ. ಹೀಗಾಗಿ ನಾವು ಎಲ್ಲರೂ ಆತನ ವಿರುದ್ಧ ಬೇಸರ ವ್ಯಕ್ತಪಡಿಸಿದೆವು. ಅಲ್ಲದೇ ಈ ವಿಚಾರವನ್ನು ಎಲ್ಲೂ ಕೂಡ ನಾವು ಬಹಿರಂಗ ಪಡಿಸಿಲ್ಲ. ಆದರೂ ತಿಮ್ಮಯ್ಯ ಸಚಿವರಿಗೆ ಮತ್ತು ಮೇಡಂಗೆ ಹೇಳಿದ್ದೇನೆ ಎಂದು ಭಾವಿಸಿ ಭಯದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಡ್ರೈವರ್ ಸೋಮಶೇಖರ್ ಅವರು ಆರೋಪಿಸಿದ್ದಾರೆ.