ಬೋಟ್ ಮುಳುಗಡೆಯಾಗಿ ಕಣ್ಮರೆಯಾದ ಮೀನುಗಾರರಿಗೆ ರೂ 10 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ…

107
firstsuddi

ಉಡುಪಿ: “ಸುವರ್ಣ ತ್ರಿಭುಜ” ಬೋಟ್ ಮುಳುಗಡೆಯಾಗಿ ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಾಸಕ ರಘುಪತಿ ಭಟ್ ಮನವಿ ಮಾಡಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರನ್ನು ಕೆ ರಘುಪತಿ ಭಟ್ ರವರು ಭೇಟಿಯಾಗಿ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿ 7 ಜನ ಮೀನುಗಾರರ ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಕನಿಷ್ಠ ತಲಾ ರೂ. 10 ಲಕ್ಷ ಪರಿಹಾರವನ್ನು ದೊರಕಿಸಿಕೊಡುವಂತೆ ಮನವಿ ಮಾಡಿದರು.

“ಸುವರ್ಣ ತ್ರಿಭುಜ” ಮೀನುಗಾರಿಕಾ ದೋಣಿಯು 2018ರ ಡಿಸೆಂಬರ್ 15 ರಂದು ಸಮುದ್ರದಲ್ಲಿ ಅಪಘಾತಕ್ಕಿಡಾಗಿ ಮುಳುಗಡೆಯಾಗಿದ್ದು, ಮಾಲಕ ಸಹಿತ 7 ಜನ ಮೀನುಗಾರರು ಕಣ್ಮರೆಯಾಗಿರುತ್ತಾರೆ. ಕುಟುಂಬದವರು ಇವರನ್ನೇ ಅವಲಂಬಿಸಿಕೊಂಡಿದ್ದು, 7 ಜನರ ಕುಟುಂಬದ ಆರ್ಥಿಕ ಪರಿಸ್ಥಿತಿಯು ತುಂಬಾ ಹದಗೆಟ್ಟಿರುತ್ತದೆ. ಆದ್ದರಿಂದ ಸೂಕ್ತ ಪರಿಹಾರ ದೊರಕಿಸುವಂತೆ ಮನವಿ ಮಾಡಿದರು.