ಆಂಜನೇಯ ಗುಡಿಗೆ 20 ನಿಮಿಷ ಹಣೆ ಕೊಟ್ಟು ನಿಂತು ಪ್ರಾರ್ಥನೆ ಸಲ್ಲಿಸಿದ ಕುದುರೆ-ವೀಡಿಯೋ ವೈರಲ್…

105
firstsuddi

ಬಾಗಲಕೋಟೆ : ಆಂಜನೇಯನ ಗುಡಿಯ ಮುಂದೆ ಕುದುರೆಯೊಂದು ಪ್ರಾರ್ಥನೆ ಮಾಡುವ ರೀತಿಯಲ್ಲಿ ನಿಂತು ಎಲ್ಲರನ್ನೂ ಅಚ್ಚರಿಗೊಳಿಸಿರುವ ಘಟನೆ ತಾಲ್ಲೂಕಿನ ಮುರನಾಳ ಗ್ರಾಮದ ವಸತಿ ಕೇಂದ್ರದ ಬಳಿ ಇರುವ ದೇವಾಲಯದ ಬಳಿ ನಡೆದಿದ್ದು, ಸದ್ಯ ಕುದುರೆ ಹಣೆ ಕೊಟ್ಟು ನಿಂತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುದುರೆ ಆಂಜನೇಯನ ಪುಟ್ಟ ದೇವಾಲಯದ ಬಳಿ ಬಂದು ಸುಮಾರು 20 ನಿಮಿಷಗಳ ಕಾಲ ಗುಡಿಯ ಕಟ್ಟಡಕ್ಕೆ ಹಣೆ ಕೊಟ್ಟು ನಿಂತಿರುವ ಭಂಗಿಯನ್ನು ಕಂಡ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶಾಲಾ ಶಿಕ್ಷಕರೊಬ್ಬರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.