ಮಂಡ್ಯ ಗೆದ್ದರೆ ಇಡೀ ಕರ್ನಾಟಕವೇ ಗೆದ್ದಂತೆ ಎಂದು ಸಿಎಂ ತಿಳಿದುಕೊಂಡಿದ್ದಾರೆ : ಶ್ರೀರಾಮುಲು

205
firstsuddi

ಕೊಪ್ಪಳ : ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಶ್ರೀರಾಮುಲು ಅವರು ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಪ್ರಶ್ನೆಯೇ ಇಲ್ಲ ಸುಮಲತಾ ಅಂಬರೀಶ್ ಅವರೇ ಗೆಲ್ಲುತ್ತಾರೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಗನ ಸೋಲಿನ ಭಯ ಕಾಡುತ್ತಿದೆ. ಮಂಡ್ಯ ಗೆದ್ದರೆ ಇಡೀ ಕರ್ನಾಟಕವೇ ಗೆದ್ದಂತೆ ಎಂದು ಸಿಎಂ ತಿಳಿದುಕೊಂಡಿದ್ದಾರೆ. ್ಲ ಲೋಕಸಭಾ ಚುನಾವಣೆಯ ಬಳಿಕ ಒಳ್ಳೆಯದೇ ಆಗುತ್ತದೆ. ಮೈತ್ರಿ ಸರ್ಕಾರ 3-4 ಸ್ಥಾನವಷ್ಟೇ ಗೆಲ್ಲುವುದು. ಕೇಂದ್ರದಲ್ಲಿ ಮೋದಿಯವರೇ ಪ್ರಧಾನಿ ಆಗುತ್ತಾರೆ ಹಾಗೂ ರಾಜ್ಯದಲ್ಲಿ ಬಿಜೆಪಿ ಅರಳುತ್ತದೆ ಎಂದು ಹೇಳಿದ್ದಾರೆ.