ಮೀನು ಹಿಡಿಯಲು ಕುಳಿತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ…

76
firstsuddi

ಕಾರವಾರ (ಉತ್ತರಕನ್ನಡ) : ಮೀನು ಹಿಡಿಯಲು ಕುಳಿತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿ ದಡದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.

ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೋಹಿನ್ ಮೆಹಬೂಬ್ (15) ಮೊಸಳೆ ಪಾಲಾದ ಬಾಲಕನಾಗಿದ್ದು, ಈತ ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ. ಈ ವೇಳೆ ಮೊಸಳೆ ಈತನನ್ನು ಹೊತ್ತೊಯ್ದಿದೆ.

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸ್ಥಳೀಯರು ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ ಜಂಗಲ್ ಲಾಡ್ಜಸ್ ಹಾಗೂ ಗಣೇಶಗುಡಿ ರ‍್ಯಾಪ್ಟಿಂಗ್​​ನವರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ರ‍್ಯಾಪ್ಟ್ ತರಿಸಿ ಅವರಿಂದಲೂ ತಡರಾತ್ರಿವರೆಗೂ ಪತ್ತೆ ಕಾರ್ಯಾಚರಣೆ ನಡೆಸಿದರೂ ಬಾಲಕನ ಸುಳಿವು ಪತ್ತೆಯಾಗದ ಹಿನ್ನಲೆ ಇಂದು ಮತ್ತೆ ಶೋಧ ನಡೆಸಲಾಗುತ್ತಿದೆ.