ಮುಸ್ಲಿಂ ಯುವಕರು ಉಗ್ರ ಸಂಘಟನೆ ಸೇರಲು ಪಿಎಫ್‍ಐನಿಂದ ಪ್ರೋತ್ಸಾಹ : ಎನ್‍ಐಎ.

51
firstsuddi

ನವದೆಹಲಿ : ಪಿಎಫ್ ಐ ಮುಖಂಡರು, ಸದಸ್ಯರು ಮತ್ತು ಅದರ ಸಹವರ್ತಿಗಳು ಮುಸ್ಲಿಂ ಯುವಕರನ್ನು ಲಷ್ಕರ್ ಎ ತಯಬಾ, ಐಸಿಸ್ ಮತ್ತು ಅಲ್ ಕೈದಾದಂತಹ ಉಗ್ರ ಸಂಘಟನೆಗಳನ್ನು ಸೇರುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಭಯೋತ್ಪಾದನಾ ಕೃತ್ಯಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ತರುವುದಕ್ಕೆ ಸಂಚು ನಡೆಸಿದ್ದಾರೆ ಎಂದು ಕೇರಳದ ವಿಶೇಷ ನ್ಯಾಯಾಲಯಕ್ಕೆ ಎನ್ ಐಎ ಸಲ್ಲಿಸಿರುವ ರಿಮ್ಯಾಂಡ್ ಪ್ರತಿಯಲ್ಲಿ ಹೇಳಲಾಗಿದೆ.

ಕೇರಳದಿಂದ ಕಾರ್ಯನಿರ್ವಹಿಸುತ್ತಿರುವ ಪಿಎಫ್ ಐ ಸದಸ್ಯರು, ಕಾರ್ಯಕರ್ತರು ವಿವಿಧ ಧರ್ಮಗಳು ಮತ್ತು ಗುಂಪುಗಳ ಜನರ ನಡುವೆ ದ್ವೇಷವನ್ನು ಸೃಷ್ಟಿಸುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಚು ರೂಪಿಸುತ್ತಿದ್ದಾರೆ. ಸಾವರ್ಜನಿಕರ ನೆಮ್ಮದಿಗೆ ಭಂಗ ತರುವ, ಭಾರತದ ವಿರುದ್ಧ ಅಸಮಾಧಾನ ಉಂಟು ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ ಐಎ ಆರೋಪಿಸಿದೆ.

ಎನ್ ಐಎ, ಇಡಿ ಮತ್ತು ರಾಜ್ಯ ಪೊಲೀಸ್ ಪಡೆಗಳು ದೇಶಾದ್ಯಂತ ನಡೆಸಿದ ಶೋಧಗಳಲ್ಲಿ ಗುರುವಾರ 106 ಪಿಎಫ್ ಐ ನಾಯಕರು, ಕಾರ್ಯಕರ್ತರು ಮತ್ತು ಇತರರನ್ನು ಬಂಧಿಸಿದ ನಂತರ ಈ ಸಂಗತಿಗಳು ಬಹಿರಂಗಗೊಂಡಿವೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸೋಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರದ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್ ಐಎ ಶೋಧ ನಡೆಸಿದೆ.