ಮೂಡಿಗೆರೆ : ಅಗ್ರಹಾರ ಆದಿಸುಬ್ರಹ್ಮಣ್ಯನ ದರ್ಶನಕ್ಕೆ ಬಂದ ವಿಶೇಷ ನಾಗರಹಾವು…

7254
firstsuddi

ಮೂಡಿಗೆರೆ : ಷಷ್ಠಿಯ ದಿನದಂದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನಕ್ಕೆ ವಿಶೇಷವಾದ ನಾಗರ ಹಾವೊಂದು ಬಂದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ನಿನ್ನೆ ತಾಲೂಕಿನ ಅಗ್ರಹಾರದ ಆದಿಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಷಷ್ಠಿ ಪೂಜೆ ನಡೆಯುತ್ತಿತ್ತು. ಸುಬ್ರಹ್ಮಣ್ಯನ ದರ್ಶನಕ್ಕೆ ವಿಭೂತಿಧರಿತನಾಗಿ ಬಂದ ನಾಗರಹಾವನ್ನ ಕಂಡು ಭಕ್ತಾಧಿಗಳು ಸುಬ್ರಹ್ಮಣ್ಯ ಸ್ವಾಮಿಗೆ ಉಘೇ ಅಂದಿದ್ದಾರೆ. ಷಷ್ಠಿಯ ದಿನದಂದು ಪ್ರತಿ ವರ್ಷವೂ ಇಲ್ಲಿಗೆ ಹಾವು ಬರುತ್ತಿತ್ತು. ಆದರೆ ಈ ವರ್ಷ ಬಂದ ನಾಗರಹಾವಿನ ಹೆಡೆಯಲ್ಲಿ ವಿಭೂತಿಯೂ ಇದ್ದು ಭಕ್ತಾಧಿಗಳು ನಾವೇ ಧನ್ಯರು ಅಂದಿದ್ದಾರೆ. ಹಾವು ತುಂಬಾ ದೊಡ್ಡದ್ದೇನಲ್ಲ. ಚಿಕ್ಕದ್ದೂ ಅಲ್ಲ. ಮಿಂಚಿನ ವೇಗದಲ್ಲಿ ಸಂಚರಿಸುತ್ತಿದ್ದ ಹಾವನ್ನ ಕಂಡು ಜನ ಇದು ದೈವದ ಹಾವೇ ಎಂದು ಕೈ ಮುಗಿದಿದ್ದಾರೆ. ಅಷ್ಟೆ ಅಲ್ಲದೇ ಹಾವಿನ ಹೆಡೆಗೆ ವಿಭೂತಿ ಹಚ್ಚುವ ಧೈರ್ಯವನ್ನೂ ಯಾರು ಮಾಡಲ್ಲ. ಆದರೆ, ಈ ಹಾವಿನ ಹೆಡೆಯಲ್ಲಿ ಮೂರು ಬೆರಳಿನ ವಿಭೂತಿ ಆಕಾರ ಸ್ಪಷ್ಟವಾಗಿ ಕಾಣುತ್ತಿದ್ದು ಜನ ಆಶ್ಚರ್ಯಕ್ಕೀಡಾಗಿದ್ದಾರೆ.