ಕೊಟ್ಟಿಗೆಹಾರ : ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅಮರಣಾಂತ ಉಪವಾಸ ಕೈಗೊಂಡು ತೀವ್ರತರವಾದ ಹೋರಾಟ ನಡೆಸುವುದಾಗಿ ಬಣಕಲ್ ಗ್ರಾ.ಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾ,.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು ಮಾತನಾಡಿ ಹೆಗ್ಗುಡ್ಲು ಗ್ರಾಮಸ್ಥರು ಕೆಲ ದಿನಗಳ ಹಿಂದೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಕೆಲದಿನಗಳ ಹಿಂದೆ ಗ್ರಾ.ಪಂಗೆ ಮನವಿ ಪತ್ರವನ್ನು ನೀಡಿದ್ದು, ಗ್ರಾ.ಪಂಯಲ್ಲಿ ನಡೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಮನವಿ ಪತ್ರವನ್ನು ಮಂಡಿಸಲಾಗಿದ್ದು, ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚದರ ಕಿ.ಮಿ ವ್ಯಾಪ್ತಿಯ ಪ್ರದೇಶವನ್ನು ಬಹುತೇಕ ಮಾನವ ಸಂಪರ್ಕದಿಂದ ಮುಕ್ತಗೊಳಿಸುವ ಹುನ್ನಾರವಾಗಿದ್ದು ವರದಿ ಜಾರಿಯಾದರೆ ಉಗ್ರ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.
ಕಸ್ತೂರಿ ರಂಗನ್ ವರದಿ ಜಾರಿಯಾಗುವುದರಿಂದ ಕೃಷಿಕಾರ್ಮಿಕರು, ರೈತರು, ಕೂಲಿ ಕಾರ್ಮಿಕ ಉದ್ಯೋಗಕ್ಕೆ ತೊಂದರೆಯಾಗುವುದು. ಸಭೆಯಲ್ಲಿ ವರದಿ ಜಾರಿಯಾಗುವುದರಿಂದ ಆಗಬಹುದಾದ ಸಾಧಕ ಭಾದಕಗಳನ್ನು ಚರ್ಚಿಸಿ ವರದಿ ಜಾರಿಯಾದರೆ ಅಮರಣಾಂತ ಉಪವಾಸ ಕೈಗೊಂಡು ತೀವ್ರತರವಾದ ಹೋರಾಟ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಿ, ಪಿಡಿಓ ಕೃಷ್ಣಪ್ಪ, ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕಸ್ತೂರಿರಂಗನ್ ವರದಿ ಜಾರಿಯಾದರೆ ಅಮರಣಾಂತ ಉಪವಾಸ, ಹೋರಾಟ ನಡೆಸುವುದಾಗಿ ಗ್ರಾ.ಪಂ ಸಭೆಯಲ್ಲಿ ತೀರ್ಮಾನ










