ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರ ಬಂಧನ…

181
firstsuddi

ಮಂಗಳೂರು : ಮಹಿಳೆಯರ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧತರನ್ನು ಬೆಂಗಳೂರು ನಿವಾಸಿಗಳಾದ ಗೋಕುಲ್ ರಾಜ್(20) ಹಾಗೂ ಪವನ್ ಎಲ್(20) ಎಂದು ಗುರುತಿಸಲಾಗಿದೆ. ಬಂಧಿತರು ಸಾಕ್ಷಿರಾಜ್ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ವ್ಯಕ್ತಿಯೊಬ್ಬರಿಗೆ ಮಹಿಳೆಯ ಹೆಸರಿನಲ್ಲಿ ಕರೆ ಮಾಡಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಬಳಿಕ ವ್ಯಕ್ತಿಯ ಬಳಿ ಅಶ್ಲೀಲ ಚಿತ್ರಗಳನ್ನು ಕೇಳಿ ಪಡೆದು ಹಣಕ್ಕಾಗಿ ಆಮಿಷವೊಡ್ಡುತ್ತಿದ್ದರು. ಒಂದು ವೇಳೆ ಹಣ ನೀಡದೇ ಇದ್ದರೆ ವ್ಯಕ್ತಿಯ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣ ಪಡೆದುಕೊಳ್ಳುತ್ತಿದ್ದರು. ಬಳಿಕ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅವರು ಕೇಳಿದ ಹೆಚ್ಚಿನ ಹಣ ನೀಡದೆ ಇದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳು ಎಂದು ಬಿಂಬಿಸಿ ಕರೆ ಮಾಡಿ ವಂಚಿಸಿದ್ದಾರೆ. ಇವರಿಂದ ವಂಚನೆಗೊಳಗಾದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ತನಿಖೆ ನಡೆಸಿದ ಠಾಣೆಯ ನಿರೀಕ್ಷಕರಾದ ಬಿ.ಸಿ. ಗಿರೀಶ್ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.