ಚಿಕ್ಕಮಗಳೂರು : ಪ್ರಸಕ್ತ ಸಾಲಿನಲ್ಲಿ ಸಹಕಾರ ಬ್ಯಾಂಕ್ 60 ಲಕ್ಷದ 14 ಸಾವಿರದ 101 ರೂ ನಿವ್ವಳ ಲಾಭ ಗಳಿಸಿದೆ : ಹೆಚ್.ಎನ್.ನಂಜೇಗೌಡ.

114
firstsuddi

ಚಿಕ್ಕಮಗಳೂರು : ಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ 60 ಲಕ್ಷದ 14 ಸಾವಿರದ 101 ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹೆಚ್.ಎನ್.ನಂಜೇಗೌಡ ಹೇಳಿದರು.
ನಗರದ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಬ್ಯಾಂಕಿನ 24ನೇ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಲಾಭದಲ್ಲಿ ಶೇ.12 ಡಿವಿಡೆಂಟ್ ಅನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ 4,225 ಸದಸ್ಯರಿಂದ 254.53 ಲಕ್ಷ ರೂ ಶೇರು ಸಂಗ್ರಹಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಸಂಸ್ಥೆ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಬ್ಯಾಂಕಿನ ಶೇರು ಬಂಡವಾಳ 239.39 ಲಕ್ಷದಿಂದ 254.53 ಲಕ್ಷಕ್ಕೆ ಏರಿಕೆಯಾಗಿದೆ ಠೇವಣಿ ಸಂಗ್ರಹ 53.19 ಕೋಟಿಯಿಂದ 55.41 ಕೋಟಿಗೆ ಏರಿಕೆಯಾಗಿದೆ, 38.65 ರೂ ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ವರ್ಷ ಸಂಸ್ಥೆಗೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.

ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಸಮಾರಂಭದಲ್ಲಿ ರುಪೇ ಕಾರ್ಡ್ ವಿತರಿಸಲಾಯಿತು, ಹಿರಿಯ ಸದಸ್ಯ ಧನಲಿಂಗೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಇತ್ತೀಚೆಗೆ ನಿಧನರಾದ ಬ್ಯಾಂಕಿನ ಸದಸ್ಯರು ಮತ್ತು ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ವಿ.ರಾಘವೇಂದ್ರ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪಿ.ಮಂಜುನಾಥ ಜೋಷಿ, ನಿರ್ದೇಶಕರಾದ ಎಂ.ವಿ.ಷಡಕ್ಷರಿ, ಪದ್ಮಾ ತಿಮ್ಮೇಗೌಡ, ಬಿ.ಹೆಚ್.ಶ್ರೀಕಾಂತ್ ಪೈ, ಜಿ.ರಘು, ಎಂ.ಎಸ್.ಉಮೇಶ್, ಭಗವತಿ ಹರೀಶ್, ಕೆ.ಎಸ್.ಧರ್ಮರಾಜ್, ಹೆಚ್.ಸಿ.ಶಶಿಪ್ರಸಾದ್, ಶೈಲಜಾ ಮಂಜುನಾಥ್, ಸಿ.ಆರ್.ಮಂಜು, ಕೆ.ಟಿ.ಮಂಜುನಾಥ್, ಸಿ.ವಿ.ಹರ್ಷ, ಕೆ.ಟಿ.ಪುಟ್ಟಣ್ಣ, ವ್ಯವಸ್ಥಾಪಕಿ ಪಿ.ವಿಜಯ ಉಪಸ್ತಿತರಿದ್ದರು.