ಮೈಸೂರು : ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶ…

70
firstsuddi

ಮೈಸೂರು : ಜಿಲ್ಲೆಯಾದ್ಯಂತ ಕಳೆದ 20 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ಜೊತೆಗೆ ಮಕ್ಕಳು ಶಾಲೆಗೆ ಹೋಗಲು ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಸರ್ಕಾರಿ, ಅನುದಾನ ಹಾಗೂ ಅನುದಾನ ರಹಿತ ಮತ್ತು ಸಿಬಿಎಸ್ ಇ ಪಠ್ಯ ಕ್ರಮ ಹೊಂದಿರುವ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದು, ನಾಳೆ ನೀಡಲಾಗುವ ರಜೆಗೆ ಬದಲಾಗಿ ಮುಂದಿನ ಶನಿವಾರ ಪೂರ್ತಿ ದಿನ ತರಗತಿ ನಡೆಸುವ ಷರತ್ತಿನೊಂದಿಗೆ ರಜೆ ಘೋಷಿಸಲಾಗಿದೆ.