ಗಾಂಧೀನಗರ : ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಆನಂದ್ ಬಳಿ ನಿನ್ನೆ ಸಂಜೆ 4.37ಕ್ಕೆ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ.
ಅಹಮದಾಬಾದ್ ನ ನಿವಾಸಿಯಾಗಿರುವ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಅವರು, ಆನಂದ್ ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ವೇಳೆ ಆನಂದ್ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ವಂದೇ ಭಾರತ್ ಎಕ್ಸ್ ಪ್ರೆಸ್ ಮಹಿಳೆ ಮೇಲೆ ಹರಿದಿದೆ. ರೈಲು ಗಾಂಧಿನಗರದಿಂದ ಮುಂಬೈ ಸೆಂಟ್ರಲ್‍ಗೆ ತೆರಳುತ್ತಿತ್ತು.
ಸೆಪ್ಟೆಂಬರ್ 30 ರಂದು ಗಾಂಧೀನಗರ ರಾಜಧಾನಿ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲಿನ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.










