ಹೆಣ್ಣು ಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ : ಶಾಮನೂರು ಶಿವಶಂಕರಪ್ಪ.

65
firstsuddi

ಚಿತ್ರದುರ್ಗ : ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.

ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಮಠದಿಂದ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಷಣದ ವೇಳೆ ಮಾತನಾಡಿದ ಅವರು, ಪೋಕ್ಸೊ ಕೇಸ್ ನಲ್ಲಿ ಮುರುಘಾಶ್ರೀ ಜೈಲುಪಾಲಾಗಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ನಮ್ಮ ಹೆಣ್ಣು ಮಕ್ಕಳು ಸಹ ಎಚ್ಚರವಾಗಿರಬೇಕು. ನಮ್ಮೆಲ್ಲರ ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದು ವೀರಶೈವರು ಅರಿಯಬೇಕು. ಒಳಪಂಗಡ ಬೇಧ ಮರೆತು ವೀರಶೈವರು ಒಂದಾಗಬೇಕು. ಇವತ್ತಿನ ಸಮಾರಂಭದಲ್ಲಿ ಎಲ್ಲರೂ ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು. ಸ್ವಾಭಿಮಾನದಿಂದ ನಾವು ಇರಬೇಕು. ಸರ್ಕಾರದ ಮೇಲೆ ಡಿಪೆಂಡ್ ಆದರೆ ಎಂದೂ ಕೆಲಸ ಆಗಲ್ಲ. ನಾವು ಹತ್ತು ರೂ. ದುಡಿದರೆ ಒಂದು ರೂ. ದಾನ ಧರ್ಮ ಮಾಡಬೇಕೆಂದ ಅವರು, ನಾವೆಲ್ಲಾ ದಾನ ಧರ್ಮದಿಂದಲೇ ಶ್ರೀಮಂತರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಾಣಿಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀ, ಸಿಎಂ ಬೊಮ್ಮಾಯಿ,ಸಚಿವರಾದ ಬಿಸಿಪಾಟೀಲ್, ಬಿಸಿ ನಾಗೇಶ್ ಸೇರಿದಂತೆ ಜಿಲ್ಲೆಯ ಶಾಸಕರುಗಳು ಹಾಗೂ ಗಣ್ಯರು ಹಾಜರಿದ್ದರು.