ವಿಚ್ಛೇದನ ಜೀವನಾಂಶ ಹಣ ಕೊಡಲಾಗದೇ ಜೈಲಿಗೆ ಹೋಗುವ ಭಯ – ಪತಿ ಆತ್ಮಹತ್ಯೆ…

67
firstsuddi

ದೊಡ್ಡಬಳ್ಳಾಪುರ : ವಿಚ್ಛೇದನ ಬಳಿಕ ಪತ್ನಿಗೆ ಜೀವನಾಂಶದ ಹಣ ಕೊಡಲಾಗದೇ ಜೈಲಿಗೆ ಹೋಗುವ ಭಯದಿಂದ ವಿಷ ಕುಡಿದು ಪತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಪ್ರಿಯದರ್ಶಿನಿ ಲೇಔಟ್​ನ ಅಮೀರ್(30) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಅಮೀರ್ ಶಿಡ್ಲಘಟ್ಟ ಮೂಲದ ನೂರ್ ಜಾನ್ ಎಂಬಾಕೆಯನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಇವರಿಬ್ಬರ ಸಂಸಾರದಲ್ಲಿ ಕಲಹ ಶುರುವಾಗಿದೆ. ಈ ಜಗಳ ಕೋರ್ಟ್ ಮೆಟ್ಟಿಲೇರಿ ಬಳಿಕ ಇಬ್ಬರು ವಿಚ್ಚೇದನ ಪಡೆದಿದ್ದರು.

ವಿಚ್ಛೇದನದ ಸಂದರ್ಭದಲ್ಲಿ ಪತ್ನಿಗೆ 1 ಲಕ್ಷ ರೂಪಾಯಿ ಹಣವನ್ನ ಜೀವನಾಂಶವಾಗಿ ಕೊಡಬೇಕಾಗಿತ್ತು. ಹಣ ಹೊಂದಿಸಲಾಗದೇ ಪರಿತಪಿಸುತ್ತಿದ್ದ ಅಮೀರ್ ಕೋರ್ಟ್ ನಲ್ಲಿ ಹಣ ಕಟ್ಟಲಾಗದಿದ್ದರೆ ಜೈಲಿಗೆ ಹೋಗಬೇಕು ಎನ್ನುವ ಭಯದಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದು ಅಸ್ವಸ್ಥರಾಗಿದ್ದ ಅಮೀರ್ ನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.