ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ…

296
firstsuddi

ಮಂಗಳೂರು : ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೋರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರ ಮುಂಬೈ ನಿವಾಸಿ ತಯ್ಯಬ್ (19) ಎಂದು ಗುರುತಿಸಲಾಗಿದೆ. ಯುವತಿಯು ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಆಕೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹಾರಾಷ್ಟ್ರ ಮುಂಬೈ ನಿವಾಸಿಯಾದ ಆರೋಪಿ ತಯ್ಯಬ್ (19 ವರ್ಷ) ಎಂಬಾತನ ಪರಿಚಯವಾಗಿದೆ. ಇಬ್ಬರೂ ಕೂಡ ಸುಮಾರು ಒಂದುವರೆ ವರ್ಷಗಳಿಂದ ಸ್ನೇಹಿತರಾಗಿದ್ದು, ದಿನಾಂಕ: 2/6/2019 ರಂದು ಸಂತ್ರಸ್ಥ ಯುವತಿಯನ್ನು ಭೇಟಿಯಾಗಲು ಆರೋಪಿ ತಯ್ಯಬ್ ನು ಪುತ್ತೂರಿಗೆ ಬಂದು ಲಾಡ್ಜ್ ನಲ್ಲಿ ರೂಂ ಮಾಡಿ ಲಾಡ್ಜ್ ನಲ್ಲಿ ಸಂತ್ರಸ್ಥ ಯುವತಿಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿರುತ್ತಾನೆ ಹಾಗೂ ದಿನಾಂಕ 20/10/2019 ರಂದು ಎರಡನೇ ಬಾರಿ ಸಂತ್ರಸ್ಥ ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್ ಗೆ ಬರಹೇಳಿದ್ದು, ಭೇಟಿಯಾಗಲು ತೆರಳಿದ ಸಂತ್ರಸ್ಥ ಯುವತಿಗೆ ಲಾಡ್ಜ್ ನಲ್ಲಿ ಇಚ್ಚೆಗೆ ವಿರುದ್ದ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಕುರಿತು ಅಕ್ಟೋಬರ್ 20 ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಯುವತಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.