ವಿಶ್ವದ ನಂ.1 ಚೆಸ್ ಆಟಗಾರನನ್ನು ಸೋಲಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ್.

155
firstsuddi

ಚೆನ್ನೈ : ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಗ್ನಾನಂದ್ ಅವರು ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್​​ ಗೆ ಸೋಲಿನ ರುಚಿ ತೋರಿಸಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ ಆನ್ ಲೈನ್ ರ್ಯಾಪಿಡ್ ಚೆಸ್ ಸ್ಪರ್ಧೆಯಾಗಿರುವ ಏರ್ಥಿಂಗ್ಸ್ ಮಾಸ್ಟರ್ಸ್ 8ನೇ ಸುತ್ತಿನಲ್ಲಿ ಭಾರತದ ಪ್ರಗ್ನಾನಂದ್ ಅವರು ಕಪ್ಪು ಕಾಯಿಗಳೊಂದಿಗೆ ಆಟವಾಡಿ ಕೇವಲ 39 ನಡೆಗಳಲ್ಲಿಯೇ ವಿಶ್ವ ಚಾಂಪಿಯನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್​​ ರಿಗೆ ಸೋಲುಣಿಸಿದರು. ಈ ಮೂಲಕ ಪ್ರಗ್ನಾನಂದ್ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಭಾರತ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಈ ಸಾಧನೆಯನ್ನು ಮಾಡಿದ್ದರು. ಸದ್ಯ ಪ್ರಗ್ನಾನಂದ್, 4 ಸೋಲು ಹಾಗೂ ಎರಡು ಡ್ರಾಗಳ ಮೂಲಕ ಜಂಟಿ 12ನೇ ಸ್ಥಾನದಲ್ಲಿದ್ದರೂ, ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.