ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್…

55
firstsuddi

ಬೆಂಗಳೂರು : ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಬಳಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮೋಹನ್, ಹನುಮೇಶ್ ಮತ್ತು ರಾಜೇಶ್ ಬಂಧಿತ ಆರೋಪಿಗಳು. ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಚೆನ್ನಾಗಿರುವ ಯುವತಿಯರ ಫೋಟೋಗಳನ್ನು ಸೇವ್ ಮಾಡಿಕೊಳ್ಳುವ ಆರೋಪಿಗಳು, ಹೈಫೈ ವೇಶ್ಯಾವಾಟಿಕೆಗೆ ಪ್ರಸಿದ್ಧವಾದ ಲೊಕ್ಯಾಂಟೊ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಆ ಫೋಟೋವನ್ನು ನೋಡಿದ ಕೆಲ ಗ್ರಾಹಕರು, ಆ ಅಕೌಂಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದರು.

ಅಡ್ವಾನ್ಸ್ ಹಣವಾಗಿ ಇಂತಿಷ್ಟು ಹಣ ಅಂತಾ ಹಾಕಿಸಿಕೊಳ್ತಿದ್ದ ಆರೋಪಿಗಳು, ನಂತರ ಆ ಅಕೌಂಟ್ ನ ಬ್ಲಾಕ್ ಮಾಡಿ ಬಿಡುತ್ತಿದ್ದರು. ಮತ್ತೆ ಅದೇ ಹುಡುಗಿಯರ ಫೋಟೋಗಳನ್ನು ಬೇರೆ ಗ್ರಾಹಕರಿಗೆ ಕಳಸುಹಿಸಿ ಇದೇ ರೀತಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.