ವಿಜಯಪುರ: ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದುಹಾಕಬೇಕು ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕಿಯಿಸಿದ ಅವರು, ನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ನಡೆಯಲ್ಲ ಎಂದರೆ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿರೋದು ಯಾಕೆ. ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವುಗಳು ಮುಂದುವರಿಯಲಿವೆ, ಅಭಿವೃದ್ಧಿ ಕೂಡ ಆಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೆಲ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಪಾವತಿ ಇಲ್ಲ ಎಂಬ ವಿಚಾರವಾಗಿ, ಈ ಕುರಿತು ಚರ್ಚೆ ಮಾಡಲಾಗುತ್ತದೆ. ಗೃಹಲಕ್ಷ್ಕೀ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು, ಬಡವರಿಗೆ ಹೋಗಬೇಕು. ಬಡವರು ಉಳಿದರೆ ಅವರಿಗೂ ಸಿಗಬೇಕು, ಆದರೆ ಶ್ರೀಮಂತರು, ಉಳ್ಳವರು ತಾವೇ ಬಿಟ್ಟು ಹೋಗಬೇಕು. ಇಲ್ಲವಾದರೆ ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದುಹಾಕಬೇಕು ಎಂದು ಹೇಳಿದರು.










