ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ – ಆರು ಮಂಗಳಮುಖಿಯರ ಬಂಧನ…

72
firstsuddi

ಮಂಗಳೂರು: ಸುರತ್ಕಲ್ ಎನ್ ಐಟಿಕೆ ಟೋಲ್ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಪತ್ಭಾಂಧವ ಆಸೀಫ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ  ಆರು ಮಂಗಳಮುಖಿಯರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಾಸವಿ ಗೌಡ(32), ಲಿಪಿಕಾ (19), ಹಿಮಾ (24), ಆದ್ಯ (22), ಮಾಯಾ (28) ಮತ್ತು ಮೈತ್ರಿ (28) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ 12:30ರ ಸುಮಾರಿಗೆ ಏಕಾಏಕಿ ಮುಗಿಬಿದ್ದ ಮಂಗಳಮುಖಿಯರ ಗುಂಪು ಅಸೀಫ್ ಅವರ ಜತೆಗೆ ಅಸಭ್ಯವಾಗಿ ವರ್ತಸಿ, ಅಶ್ಲೀಲವಾಗಿ ನಿಂದಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.