ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಲೀಡರ್ ಆದವರು : ಸುರೇಶ್ ಅಂಗಡಿ.

166
firstsuddi

ಬೆಳಗಾವಿ : ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು, ರಾಜಕಾರಣದಲ್ಲಿ ಯಾರು ಸ್ನೇಹಿತರೂ ಅಲ್ಲ, ವೈರಿಗಳೂ ಅಲ್ಲ. ಸಿದ್ದರಾಮಯ್ಯ ಅವರು ಈಗಾ ಕಾಂಗ್ರೆಸ್‍ನಲ್ಲಿ ಇರಬಹುದು. ಆದರೆ ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಲೀಡರ್ ಆದವರು. ಆಗ ಸಿದ್ದರಾಮಯ್ಯ ಅವರು ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್‍ನ್ನು ಟೀಕೆ ಮಾಡುತ್ತಿದ್ದರು. ಬಳಿಕ ಅವರು ಸೇರಿರುವುದು ಸೋನಿಯಾ ಗಾಂಧಿ ಅವರ ಇಟಾಲಿಯನ್ ಕಾಂಗ್ರೆಸ್‍ಗೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಇಂದಿನ ಕಾಂಗ್ರೆಸ್ ನಿಜವಾದ ಕಾಂಗ್ರೆಸ್ ಅಲ್ಲ. ಹಳೇ ಕಾಂಗ್ರೆಸ್ ನಲ್ಲಿರುವವರು ತ್ಯಾಗ ಬಲಿದಾನದ ವಿಚಾರ ಮಾಡಿದಾಗ ಇಂದಿನ ಪಕ್ಷ ಕೇವಲ ಇಟಾಲಿಯನ್ ಕಾಂಗ್ರೆಸ್. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕುಮಾರಸ್ವಾಮಿ ನಾವ್ಯಾರು ಜಾತಿ ರಾಜಕಾರಣಿಗಳಲ್ಲ. ಕೆಲವೊಬ್ಬರು ಜಾತಿ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ದಿವಂತರಾಗಿದ್ದಾರೆ ಜಾತಿ ನೋಡಿ ಯಾರೂ ಮರಳಾಗುತ್ತಿಲ್ಲ ಎಂದು ಟೀಕೆ ಮಾಡಿದರು.