ಹಾಸನ : ನಮ್ಮನ್ನು ಬದುಕಲು ಬಿಡಿ-ಸೆಲ್ಫಿ ವೀಡಿಯೋ ಮಾಡಿ ಮನವಿ ಮಾಡಿಕೊಂಡ ಪ್ರೇಮಿಗಳು…

252
firstsuddi

ಹಾಸನ : ನಮ್ಮನ್ನು ಬದುಕಲು ಬಿಡಿ ಎಂದು ಸೆಲ್ಫಿ ವೀಡಿಯೋ ಮಾಡಿ ಪ್ರೇಮಿಗಳು ಮನವಿ ಮಾಡಿಕೊಂಡಿರುವ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಜೀವಿತಾ ಹಾಗೂ ರಾಕೇಶ್ ಎಂಬುವವರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯ ತಿಳಿದು ಯುವತಿಯ ಪೋಷಕರು ಯುವತಿಗೆ ಚಿತ್ರಹಿಂಸೆ ನೀಡುತ್ತಿದ್ದರಂತೆ. ಅಲ್ಲದೇ ಆಕೆಯ ಅತ್ತೆಯ ಮಗನೊಂದಿಗೆ ವಿವಾಹ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಜೀವಿತಾ ತನ್ನ ಪ್ರೇಮಿ ರಾಕೇಶ್ ಜೊತೆ ಮನೆ ಬಿಟ್ಟು ಓಡಿ ಹೋಗಿ ಬಳಿಕ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದಾರೆ. ಮನೆಯಿಂದ ಓಡಿ ಬಂದ ಮೇಲೆ ನಾವು ಬಸ್ಸಿನಲ್ಲಿಯೇ ತಿರುಗಾಡುತ್ತಿದ್ದೆವು. ಮೊದಲು ಧರ್ಮಸ್ಥಳಕ್ಕೆ ಹೋದೆವು. ಅಲ್ಲಿರಲು ನಮಗೆ ಭಯವಾಯಿತು. ಬಳಿಕ ನಾವು ಬೆಂಗಳೂರಿಗೆ ತೆರಳಿ ರಿಜಿಸ್ಟಾರ್ ಮ್ಯಾರೇಜ್ ಮಾಡಿಕೊಂಡಿದ್ದೇವೆ. ಆದರೆ ನನ್ನ ತಂದೆ ರಾಕೇಶ್‍ನನ್ನು ಹೊಡೆದು ನನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ವೀಡಿಯೋದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದು, ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.