ಹೊಸ ವರ್ಷಕ್ಕೆ ಬಸ್ ದರ ಶೇ.15 ರಷ್ಟು ಏರಿಕೆ ಶಾಕ್ ಕೊಟ್ಟ ಸರ್ಕಾರ.

27

ಬೆಂಗಳೂರು: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ಬೆಲೆಯನ್ನು ಶೇ.15 ರಷ್ಟು ಏರಿಕೆ ಮಾಡಲು ಇಂದು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಶಕ್ತಿ ಯೋಜನೆ, ಡೀಸೆಲ್ ಬೆಲೆ ಹೆಚ್ಚಳ ಸೇರಿದಂತೆ ಇತ್ಯಾದಿ ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸರ್ಕಾರ ಈಗ ಕೊನೆಗೆ ಅನಿವಾರ್ಯವಾಗಿ ಪ್ರಯಾಣ ಬೆಲೆವನ್ನು ಏರಿಕೆ ಮಾಡಲು ಮುಂದಾಗುತ್ತಿದೆ. ಬಿಎಂಟಿಸಿ ಬಸ್ ಬೆಲೆ ಹೆಚ್ಚಳವಾಗಿ ಹತ್ತು ವರ್ಷ ಆಗಿದ್ದರೆ, ಕೆಎಸ್‍ಆರ್‍ಟಿಸಿ ದರ ಹೆಚ್ಚಳವಾಗಿ ಐದು ವರ್ಷವಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯ ನಂತರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೆಲೆ ಹೆಚ್ಚಳದ ಪ್ರಮಾಣದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. 4 ನಿಗಮಗಳಿಂದ ಬೇರೆ ಬೇರೆ ಬೆಲೆ ಏರಿಕೆಗೆ ಪ್ರಸ್ತಾವನೆ ಬಂದಿದೆ. ಎನ್‍ಡಬ್ಲ್ಯೂ ಕೆಎಸ್‍ಆರ್‍ಟಿಸಿಯಿಂದ 25%, ಬಿಎಂಟಿಸಿಯಿಂದ 42%, ಕೆಎಸ್‍ಆರ್‍ಟಿಸಿ ಮತ್ತು ಕೆಕೆಆರ್‍ಟಿಸಿಯಿಂದ 28% ಬೆಲೆ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿದೆ. 4 ನಿಗಮಗಳ ಪ್ರಸ್ತಾವನೆಯನ್ನು ಅಳೆದು ತೂಗಿ ಕೊನೆಯದಾಗಿ ಶೇ.15 ರಷ್ಟು ಬಸ್ ಟಿಕೆಟ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. 2020 ಫೆಬ್ರವರಿ 26 ರಂದು ಕೆಕೆಆರ್‍ಟಿಸಿ, ಕೆಎಸ್‍ಆರ್‍ಟಿಸಿ ಹಾಗೂ ಎನ್‍ಡಬ್ಲೂ ಕೆಎಸ್‍ಆರ್‍ಟಿ ದರ 12% ಏರಿಕೆಯಾಗಿತ್ತು. 2014 ರಲ್ಲಿ ಬಿಎಂಟಿಸಿ 17% ಬೆಲೆ ಹೆಚ್ಚಳ ಮಾಡಿತ್ತು. ಬಳಿಕ 2015 ರಲ್ಲಿ 2% ಇಳಿಕೆ ಮಾಡಿ 15% ಬೆಲೆ ಕಡಿಮೆ ಮಾಡಲಾಗಿತ್ತು. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.