18 ಅರೆಸ್ಟ್ ವಾರೆಂಟ್ ಇದ್ದ ಸೆಲೆಬ್ರಿಟಿ ಮನೆಗಳ್ಳನ ಬಂಧನ…

53
firstsuddi

ಬೆಂಗಳೂರು: ಸೆಲೆಬ್ರಿಟಿ ಮನೆಗಳ್ಳನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಅರೆಸ್ಟ್ ಆಗಿದ್ದಾನೆ. ಆರೋಪಿಯಿಂದ ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ 18 ಅರೆಸ್ಟ್ ವಾರೆಂಟ್ ಬಾಕಿ ಇವೆ.

ಆರೋಪಿ ಕಾರ್ತಿಕ್ ಈ ಹಿಂದೆ ಇಬ್ಬರ ಜೊತೆ ಕೊಲೆ ಕೇಸ್​​ನಲ್ಲಿ ಭಾಗಿಯಾಗಿದ್ದ. ಒಂಟಿ ಮನೆ, ಬೀಗ ಹಾಕಿದ್ದ ಮನೆಗಳನ್ನು ನೋಡಿ ಕಳ್ಳತನ ಮಾಡ್ತಿದ್ದ. ಕಾರ್ತಿಕ್ ಇತ್ತೀಚೆಗೆ ಇಬ್ಬರು ಸಹಚರರೊಂದಿಗೆ ಕಳ್ಳತನಕ್ಕೆ ಯತ್ನಿಸಿದ್ದ. ಕದ್ದ ಚಿನ್ನವನ್ನು ಒಂದೇ ಕಡೆ ಅಡವಿಡುತ್ತಿದ್ದ. ನಂತರ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೋಗಿ ಆ ಹಣ ಖರ್ಚು ಮಾಡುತ್ತಿದ್ದ. ಸದ್ಯ ಆರೋಪಿ ಕಾರ್ತಿಕ್​​ನನ್ನ ಪೊಲೀಸರು ಬಂಧಿಸಿದ್ದಾರೆ.