3 ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ!

56
firstsuddi

ಮಂಡ್ಯ: ಮೂರು ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಘಟನೆ ಜಿಲ್ಲೆಯ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಣ್ಣ (55) ಅತ್ಯಾಚಾರಕ್ಕೆ ಯತ್ನಿಸಿದಾತ. ಆಟವಾಡುತ್ತಿದ್ದ ಪಕ್ಕದ ಮನೆಯ ಮಗುವನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದ ವಿವಸ್ತ್ರಗೊಳಿಸಿದ್ದ. ಈ ವೇಳೆ ಮಗು ಅಳುವ ಶಬ್ದ ಕೇಳಿ ಅಕ್ಕ-ಪಕ್ಕದ ನಿವಾಸಿಗಳು ಶಿವಣ್ಣ ಮನೆಯ ಬಾಗಿಲನ್ನು ಒಡೆದು ಒಳ ಹೋದಾಗ ಆರೋಪಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ.

ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಮೈಸೂರು ಕೆಆರ್‌ ಆಸ್ಪತ್ರೆಗೆ ಕರೆತಂದು ಪರೀಕ್ಷೆಗೆ ಒಳಪಡಿಸಿದರು. ಪರಾರಿಯಾಗಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.