ದಸರಾ ಹಾಗು ವೀಕ್ ಎಂಡ್‍ನ ಸಾಲು-ಸಾಲು ರಜೆಯಿಂದ ಕಾಫಿನಾಡಿನಲ್ಲಿ ಭಾರೀ ಟ್ರಾಫಿಕ್ ಜಾಮ್…

1031

ಚಿಕ್ಕಮಗಳೂರು : ಆಯುಧ ಪೂಜೆ, ದಸರಾ ಹಾಗು ವೀಕ್ ಎಂಡ್‍ನ ಸಾಲು-ಸಾಲು ರಜೆಯಿಂದ ಕಾಫಿನಾಡಿಗೆ ಪ್ರವಾಸಿಗರೇ ದಂಡೇ ಆಗಮಿಸಿದೆ. ನಿನ್ನೆ ಆಯುಧ aಪೂಜೆ ಮುಗಿಸಿಕೊಂಡು ಸಾವಿರಾರು ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಟ್ಟಿರೋದ್ರಿಂದ ಚಿಕ್ಕಮಗಳೂರು ನಗರದಲ್ಲು ಸಾಕಷ್ಟು ಟ್ರಾಫಿಕ್ ಜಾಮ್ ಆಗಿದ್ದು, ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ ರಸ್ತೆಯಲ್ಲಿ ಎರಡು ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಗಿರಿ ಮಾರ್ಗದ ಕೈಮರ ಚೆಕ್ ಪೋಸ್ಟ್ ಬಳಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ನಿಂತಲ್ಲೇ ನಿಂತು ಆಮೆ ಗತಿಯಲ್ಲಿ ಸಾಗುವಂತಾಗಿದೆ. ಭಾರೀ ಮಳೆಗೆ ಕೇರಳ ಹಾಗೂ ಕೊಡಗು ಕೊಚ್ಚಿ ಹೋಗಿರೋದ್ರಿಂದ ಕಾಫಿನಾಡು ಪ್ರವಾಸಿಗರ ನಾಡಾಗಿದ್ದು, ಹೋಟೆಲ್, ಹೋಂಸ್ಟೇ, ರೆಸಾರ್ಟ್‍ಗಳು ಕೂಡ ಫುಲ್ ಆಗಿವೆ.