ಇಂದು ಮಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ…

251
firstsuddi

ಮಂಗಳೂರು:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಏಕಕಾಲದಲ್ಲಿ ವಾರಾಣಸಿ ಹಾಗೂ ಮಂಗಳೂರಿನಲ್ಲಿ ಆರ್‍ಎಸ್‍ಎಸ್ ಬೈಠಕ್‍  ಆಯೋಜಿಸಲಾಗಿದ್ದು, ಆರ್‍ಎಸ್‍ಎಸ್ ನ ದಕ್ಷಿಣದ ಶಕ್ತಿ ಕೇಂದ್ರ ಮಂಗಳೂರಿನ ಸಂಘನಿಕೇತನದಲ್ಲಿ ಪ್ರಚಾರಕರ ಬೈಠಕ್ ನಡೆಯಲಿದ್ದು, ಈ ಬೈಠಕ್ ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕ,  ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ,ಗೋವಾ,  ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಿಂದ  400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಈ  ಸಂದರ್ಭದಲ್ಲಿ  ಅಮಿತ್‌ ಶಾ ಅವರು ಆರೆಸ್ಸೆಸ್ ಮುಖಂಡರೊಂದಿಗೆ ಮಾತನಾಡಲಿದ್ದಾರೆ.