ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು…

273
firstsuddi

ಬೆಂಗಳೂರು : ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರಾಗಿದೆ. ಕಳೆದ ಭಾನುವಾರದಿಂದ  ಜನಾರ್ದನ ರೆಡ್ಡಿಯವರು ನ್ಯಾಯಾಂಗ ಬಂಧನದಲ್ಲಿದ್ದರು. ರೆಡ್ಡಿ ಪರ ವಕೀಲರು ನಿನ್ನೆ ಒಂದನೇ  ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಜಗದೀಶ್ ಅವರು ಒಂದು ಲಕ್ಷ ಬಾಂಡ್​ ಮತ್ತು ಇಬ್ಬರ ಶ್ಯೂರಿಟಿ  ಮೇರೆಗೆ  ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಕಾರಾಗೃಹ ವಾಸದಿಂದ ಜನಾರ್ದನ ರೆಡ್ಡಿಯವರು ಹೊರಬಂದಿದ್ದಾರೆ.