ಬೆಂಗಳೂರು :ಸ್ಯಾಂಡಲ್‌ವುಡ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮದುವೆ ಡಿಸೆಂಬರ್ 11 ಡಿಸೆಂಬರ್ 12 ಕ್ಕೆ ನಿಗದಿಯಾಗಿದ್ದು, ಸರಳವಾಗಿ ವಿವಾಹವಾಗಲು ದಿಗಂತ್ ಹಾಗೂ ಐಂದ್ರಿತಾ ರೈ ನಿರ್ಧರಿಸಿದ್ದಾರೆ. ಡಿಸೆಂಬರ್ 15ಕ್ಕೆ ಸಿನಿ ಸ್ನೇಹಿತರಿಗೆ ಪಾರ್ಟಿ ಕೊಡಲಿದ್ದಾರೆ. ಮನಸಾರೆ , ಪಾರಿಜಾತ ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು.










