ರಮ್ಯಾ ವಿರುದ್ಧ ಅಂಬರೀಷ್ ಅಭಿಮಾನಿಗಳ ಆಕ್ರೋಶ…

261
firstsuddi

ಮಂಡ್ಯ : ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ನಟ ಅಂಬರೀಶ್ ಅವರ  ಅಂತಿಮ ದರ್ಶನಕ್ಕೆ ಬಾರದ ಹಿನ್ನೆಲೆಯಲ್ಲಿ  ರಮ್ಯಾ ವಿರುದ್ಧ ಅಂಬರೀಶ್ ಅವರ  ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗಣ್ಯ ನಾಯಕರೆಲ್ಲ ಅಂಬರೀಷ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಆದರೆ   ರಮ್ಯಾ ಅವರಿಗೆ ರಾಜಕೀಯ ದಾರಿ ತೋರಿಸಿದ ಅಂಬರೀಶ್  ಅವರ ​​ ನಿಧನಕ್ಕೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟ್ವೀಟ್​ ಮಾಡಿ,  ಅಂತಿಮ ದರ್ಶನ ಪಡೆಯಲು  ಬರದೇ ಇರುವುದು   ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅಭಿಮಾನಿಗಳಿಂದ    ತೀವ್ರ  ಆಕ್ರೋಶ ವ್ಯಕ್ತವಾಗುತ್ತಿದೆ.  

 ರಮ್ಯಾ ಕಳೆದ ತಿಂಗಳು ಇನ್ಸ್​​ಟಾಗ್ರಾಂನಲ್ಲಿ ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಖಾಯಿಲೆಯಿಂದ ಬಳಲುತ್ತಿದ್ದು,  ಸ್ವಲ್ಪ ನಿರ್ಲಕ್ಷೆ ಮಾಡಿದ್ದರು ಖಾಯಿಲೆ ಕ್ಯಾನ್ಸರ್ ಗೆ ತಿರುಗುತ್ತಿತ್ತು .  ಇದು 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು,  ಅದರಲ್ಲೂ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಇನ್ಸ್ಟಾಗ್ರಾಂ ನಲ್ಲಿ ರಮ್ಯಾ ಅವರು ಪೋಸ್ಟ್ ಮಾಡಿದ್ದಾರೆ. ಈ  ಕಾರಣದಿಂದ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಗೈರಾಗಲು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.