ಮೂಡಿಗೆರೆ : ಕದಂಕಕ್ಕೆ ಉರುಳಿದ ಪಿಕಪ್ ವಾಹನ ,ಎಂಟು ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ…

973
firstsuddi

ಮೂಡಿಗೆರೆ :ಪಿಕಪ್ ವಾಹನವೊಂದು ಕಂದಕಕ್ಕೆ  ಉರುಳಿ ಎಂಟು ಮಂದಿ ಗಾಯಗೊಂಡು, ಇಬ್ಬರ ಸ್ಥಿತಿ ಗಂಭೀರವಾಗಿರುವ  ಘಟನೆ ತಾಲೂಕಿನ ಮಲಯಮಾರುತ ತಿರುವಿನಲ್ಲಿ  ನಡೆದಿದೆ. ಹಾಸನದ ಪುರದಮ್ಮ ದೇವಸ್ಥಾನ ಪೊಜೆ ಮುಗಿಸಿ ಬರುವಾಗ ನಿನ್ನೆ ರಾತ್ರಿ 8.30ರ ಸುಮಾರಿಗೆ  ಬೆಳ್ತಂಗಡಿ ಮೂಲದ ಬಿಳ್ಳದಾಳ ಗ್ರಾಮದ ಪಿಕಫ್ ವಾಹನದ ಸ್ಟೇರಿಂಗ್ ಕಟ್ಟಾಗಿ ಕಂದಕ್ಕೆ ಉರುಳಿದೆ. ಪರಿಣಾಮ ಇಬ್ಬರ ಸ್ಥಿತಿ ಗಂಭೀರ ವಾಗಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಲಾಗಿದ್ದು, ಗಾಯಾಳುಗಳನ್ನು  ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.