ಯಶ್ ಬೆರಳು ಹಿಡಿದ ಪುಟ್ಟ ಮಗಳ ಕೈಗಳು…

310
firstsuddi

ಬೆಂಗಳೂರು: ಪುಟ್ಟ ಮಗಳು ಕೈ ಬೆರಳನ್ನು ಹಿಡಿದುಕೊಂಡಿರುವುದನ್ನು ನಟ ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ. ಒಂದು ಚಿಕ್ಕ ಕೈ ನನ್ನ ಬೆರಳನ್ನು ಹಿಡಿದುಕೊಂಡಿದೆ. ಆ ಕೈ ತಂದೆಯ ಕರ್ತವ್ಯದ ಬಗ್ಗೆ ಕೈಹಿಡಿದು ಮಾರ್ಗದರ್ಶನ ನೀಡುತ್ತಿದೆ. ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವನೆ ಆದರೆ ಈಗ ನಾನು ಅವಳ ನೋಡಿದ ಮೇಲಂತೂ ಅವಳನ್ನು ನಾನು ಹೆಚ್ಚು ಪ್ರೀತಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.