ಇಂದಿನಿಂದ ದತ್ತಜಯಂತಿ ಆರಂಭ…

374
firstsuddi

ಚಿಕ್ಕಮಗಳೂರು : ಇಂದಿನಿಂದ ದತ್ತಜಯಂತಿ ಆರಂಭವಾಗಿದ್ದು, ಬೆಳಿಗ್ಗೆ 10.30ಕ್ಕೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ವಿ.ಹೆಚ್.ಪಿ ಮತ್ತು ಬಜರಂಗದಳದ ವತಿಯಿಂದ ನೂರಾರು ಭಕ್ತರು ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ ಆಗಬೇಕು ಎಂದು ಪಟ್ಟು ಹಿಡಿದಿದ್ದು, ದತ್ತಾತ್ರೇಯ ರಥಯಾತ್ರೆಗೆ ಕಾರ್ಯಕರ್ತರು ಸಿದ್ದತೆ ಮಾಡಿಕೊಂಡಿದ್ದಾರೆ.  ಆದರೆ ಜಿಲ್ಲಾಡಳಿತ ರಥಯಾತ್ರೆಗೆ ಅನುಮತಿ ನೀಡಿಲ್ಲ. ಇಂದಿನಿಂದ 22 ರವರೆಗೆ ದತ್ತಜಯಂತಿ ನಡೆಯಲಿದೆ. ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.