ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಿ ಎಸ್  ಪಿ ಬೆಂಬಲ : ಮಾಯಾವತಿ…

239
firstsuddi

ನವದೆಹಲಿ:ಬಿಜೆಪಿಯನ್ನು  ಅಧಿಕಾರದಿಂದ ಹೊರಗುಳಿಸಲು ನಾವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲು ಒಪ್ಪಿದ್ದೇವೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ  ಅವರು ತಿಳಿಸಿದ್ದಾರೆ.  ಮಧ್ಯಪ್ರದೇಶ ವಿಧಾನಸಭಾ  ಚುನಾವಣೆಯಲ್ಲಿ   ಕಾಂಗ್ರೆಸ್  114 ಸ್ಥಾನ ಗಳಿಸಿದ್ದು, ಬಹುಮತಕ್ಕೆ 2 ಸ್ಥಾನ ಕಡಿಮೆಯಿದೆ. ಈಗ  ಬಿಎಸ್​ಪಿ 2 ಸ್ಥಾನಗಳ  ಬೆಂಬಲದೊಂದಿಗೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 116 ಕಾಂಗ್ರೆಸ್ ​ಗೆ ದೊರೆತಿದೆ. ಮಧ್ಯಪ್ರದೇಶದಲ್ಲಿ ಸರಕಾರ ರಚಿಸಲು ನಾವು ಬೆಂಬಲ ನೀಡಲು ಒಪ್ಪಿದ್ದೇವೆ, ಅವಶ್ಯಕತೆ ಇದ್ದರೆ ರಾಜಸ್ಥಾನದಲ್ಲೂ ಬೆಂಬಲ ನೀಡುವುದಾಗಿ  ಮಾಯಾವತಿ  ಅವರು ತಿಳಿಸಿದ್ದಾರೆ.