ಮೂಡಿಗೆರೆ:ಹೃದಯಾಘಾತದಿಂದ ಕುಸಿದು ಬಿದ್ದು ವ್ಯಕ್ತಿ ಸಾವು…

396
firstsuddi

ಮೂಡಿಗೆರೆ: ಹೃದಯಾಘಾತದಿಂದ ವ್ಯಕ್ತಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ ನಡೆದಿದೆ. ಶಂಕರ್ ಮೃತಪಟ್ಟ  ದುರ್ದೈವಿ. ಇವರ ಜೇಬಿನಲ್ಲಿ ಇದ್ದ ವೋಟರ್ ಐಡಿ ಕಾರ್ಡ್ ನಿಂದ  ಕಲ್ಮನೆ ಶಂಕರ್ ಎಂದು ಗುರುತಿಸಲಾಗಿದೆ. ಶಂಕರ್ ಕುಸಿದು ಬಿದ್ದಿದ್ದನ್ನು  ಗಮನಿಸಿದ ಸಾರ್ವಜನಿಕರು ಅವರನ್ನು  ಮೂಡಿಗೆರೆ ಎಂಜಿಎಂ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಗೆ ತೆರಳುವ ಮುನ್ನವೇ ಶಂಕರ್  ಅವರು ಕೊನೆಯುಸಿರೆಳೆದಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.