ಹುಬ್ಬಳ್ಳಿ: ಒಂದೇ ದಿನ 16 ಅಂಗಡಿಗಳಲ್ಲಿ ಕಳ್ಳರ ಕೈಚಳಕ…

171
firstsuddi

ಹುಬ್ಬಳ್ಳಿ: ಭಾರತ್ ಬಂದ್​ ಹಿನ್ನೆಲೆ  ಕಳ್ಳರು 16 ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  ಹುಬ್ಬಳ್ಳಿಯ ಅಮರಗೋಳ ಎಪಿಎಮ್‌ಸಿಯಲ್ಲಿ ಕಳ್ಳತನ ನಡೆದಿದ್ದು, ನಿನ್ನೆ ಬಂದ್​ಗೆ ಬೆಂಬಲ ನೀಡಿದ್ದ ಎಪಿಎಂಸಿ ವರ್ತಕರು ಅಂಗಡಿಗಳನ್ನು   ಮುಚ್ಚಿ ಪ್ರತಿಭಟನೆಯಲ್ಲಿ‌ ಪಾಲ್ಗೊಂಡಿದ್ದರು.  ಆ ಸಂದರ್ಭದಲ್ಲಿ ಕಳ್ಳರು  ಅಂಗಡಿಗಳ ಒಳಗೆ ನುಗ್ಗಿ ಸುಮಾರು 7 ಲಕ್ಷಕ್ಕೂ ಅಧಿಕ ಹಣ ಕದ್ದು ಕಳ್ಳರು  ಪರಾರಿಯಾಗಿದ್ದಾರೆ.‌ ಕಳ್ಳರು ಹಣವನ್ನು ಕಡಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ‌.