ಚಿಕ್ಕಮಗಳೂರು : ವಿಶ್ವರತ್ನ ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ 11ನೇ ದಿನದ ಪುಣ್ಯಾರಾಧನೆ ಪ್ರಯುಕ್ತ ನಗರದ ಮಲ್ಲಂದೂರು ರಸ್ತೆಯ ಸ್ನೇಹ ಗ್ರೂಪ್ ವತಿಯಿದ ಶ್ರೀ ಗಳ ಸ್ಮರಣೆ ಕಾರ್ಯಕ್ರಮ ಮತ್ತು ಅನ್ನಸಂತಾರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಗಳ ಬಾವಚಿತ್ರಕ್ಕೆ ಪುಷ್ಪನಮನ, ಪೂಜೆ, ಹಾಗು ಸಾರ್ವಜನಿಕರೀಗೆ ಅನ್ನಸಂತಾರ್ಪಣೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ಈ ವೇಳೆ ಶ್ರೀಗಳ ಕುರಿತು ಮಾತನಾಡಿದ ಸ್ನೇಹ ಗ್ರೂಪ್‍ನ ಗೋವಿಂದ ಅವರು ನಾವು ಶ್ರೀಗಳಲ್ಲಿ ಸಾಕ್ಷಾತ್ ದೇವರನ್ನು ಕಂಡಿದ್ದೇವೆ. ಅವರ ಬದುಕು ಎಲ್ಲರೀಗೂ ಆದರ್ಶ. ಸಾಕಷ್ಟು ವರ್ಷಗಳ ಕಾಲ ಸಿದ್ದಗಂಗಾ ಮಠದಲ್ಲಿ ಸಾವಿರಾರು ಮಕ್ಕಳೀಗೆ ಅನ್ನ ವಿಧ್ಯೆಯನ್ನು ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿ ಈ ನಾಡಿಗೆ ನೀಡಿದ್ದಾರೆ. ಅವರ ಮಠದಲ್ಲಿ ಬೆಳೆದ ಲಕ್ಷ, ಲಕ್ಷ ಮಕ್ಕಳು ಇವತ್ತು ದೇಶ ವಿದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಕೊಡುಗೆಯನ್ನು ಬರಿ ಮಾತುಗಳಲ್ಲಿ ಹೇಳುವುದು ಆಸಾದ್ಯ. ಸಿದ್ದಗಂಗಾ ಶ್ರೀಗಳ ಸ್ಮರಣೆ, ಆಚರಣೆಗಳನ್ನು ಸರ್ಕಾರಿ ಕಚೇರಿ ಸೇರಿ ಕರ್ನಾಟಕದ ಪ್ರತಿ ಮನೆ ಮನೆಗಳಲ್ಲಿ ಆಚರಿಸಬೇಕು ಅವರ ಕೊಡುಗೆಯನ್ನು ಆಗಾಗ ಜನರೀಗೆ ನೆನಪಿಸುವ ಶ್ರಧಾಂಜಲಿ ಸಲ್ಲಿಸುವ ಕಾರ್ಯ ನಡೆಯುತ್ತಿರಬೇಕು ಎಂದು ಹೇಳಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಅನೀಲ್ ಕುಮಾರ್ ಶ್ರೀಗಳ ಕೊಡುಗೆಯನ್ನು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿಬಿ.ಜೆ.ಪಿ ಕಾರ್ಯದರ್ಶಿ ರಾಜಪ್ಪ, ಗಿರೀಶ್ . ಕುಮಾರ ಸ್ವಾಮಿ ಅಭಿಮಾನಿಗಳ ಸಂಘ, ಅನೀಲ್‍ಕುಮಾರ್, ಗೋವಿಂದ್, ಸಿ.ಎಸ್. ಗೌರೀಶ್, ನವೀನ್. ಲಕ್ಷ್ಮೀ ಬೇಕರಿ, ಚೇತನ್, ಶಿವು, ಚರಣ್ ಎಸ್.ಕೆ ಪ್ರೇಂ, ಹರೀಶ್ ಮೆಡಿಕಲ್, ಸುನೀಲ್ ಮಂಗಳೂರು ಬೇಕರಿ, ಡಿ.ವಿ ಸಂಜಯ್, ಸುನೀಲ್ ಇಂದಾವರ, ಪ್ರವೀಣ್ ಮುಂತಾದವರು ಪಾಲ್ಗೊಂಡಿದ್ದರು.










