ಮೂಡಿಗೆರೆ : ಮೂವರು ಬೇಟೆಗಾರರ ಬಂಧನ…

1174
firstsuddi

ಮೂಡಿಗೆರೆ : ಜಿಂಕೆ, ಕಡವೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ .ಕುಂದೂರು ರಂಜಿತ್, ಬಾಳೆಗದ್ದೆ ವೆಂಕಟೇಶ್ ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಜಿಂಕೆ, ಕಡವೆ ಬೇಟೆಯಾಡಿ ಕೊಂಬುಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ  ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ  ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿತರಿಂದ ನಾಲ್ಕು ಹುಲಿ ಉಗುರು, ಎರಡು ಜೋಡಿ ಜಿಂಕೆ ಕೊಂಬು, ಎರಡು ಜೋಡಿ ಕಡವೆ ಕೊಂಬು, ಒಂದು ಜೀವಂತ ಆಮೆ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಮೂಡಿಗೆರೆ ವಲಯದಲ್ಲಿ ಪ್ರಕರಣ ದಾಖಲಾಗಿದೆ.