ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಚಿತ್ರದ ಟ್ರೈಲರ್ ಮಾರ್ಚ್ 1 ರಂದು ರಿಲೀಸ್ ಆಗಲಿದೆ. ಇದಕ್ಕೆ ಟ್ವಿಟ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶುಭಕೋರಿದ್ದಾರೆ.ನನ್ನ ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟ್ರೈಲರ್ ಮಾರ್ಚ್ 1, ಬೆಳಗ್ಗೆ 10:08 ಗಂಟೆಗೆ ಬಿಡುಗಡೆಯಾಗಲಿದೆ. ಅಪ್ಪಾಜಿಯ ಖದರ್ ಅನ್ನು ಅಭಿಯಲ್ಲೂ ಕಾಣಬಹುದು. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಸ್ವಾಗತಿಸಬೇಕಾಗಿ ವಿನಂತಿ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.











