ಐಟಿ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲ:ಸಿ.ಟಿ.ರವಿ…

196

ಚಿಕ್ಕಮಗಳೂರು : ಐಟಿ ದಾಳಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ.ರವಿ ಅವರು ಚುನಾವಣೆ ಸಂದರ್ಭ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಇರುತ್ತೆ. ಐಟಿ ಒಂದು ಸ್ವಾಯತ್ತ ಸಂಸ್ಥೆ ಇದಕ್ಕೆ ರಾಜಕಾರಣ ಬೆರೆಸೋದೆ ಒಂದು ಸಣ್ಣತನ ಅದು ಅವರು ಮಾಡುವ ರಾಜಕಾರಣ. 2012 ರಲ್ಲಿ ನಮ್ಮ ಸಂಬಂದಿಕರ ಮೇಲೆ ಟಿಟಿ ದಾಳಿ ನಡೆದಿತ್ತು. ಐಟಿ ದಾಳಿಗೆ ನಾನು ರಾಜಕೀಯ ಬಣ್ಣ ಕಟ್ಟುವು ದಿಲ್ಲ. ಹಾಲಿಂದು ಹಾಲಿಗೆ ನೀರಿಂದು ನೀರೀಗೆ. ತೆರಿಗೆ ವಂಚನೆ ಮಾಡಿದ್ರೆ ಕಟ್ಟಲೇ ಬೇಕು. ಅದೇ ಉದಾರತೆಯನ್ನ ಮುಖ್ಯಮಂತ್ರಿಗಳು ಹಾಗೂ ಸಚಿವರು ತೋರಬೇಕಿತ್ತು. ಈ ರೇಡ್ ಯಾವುದೇ ಪಕ್ಷ ಗುರಿಯಾಗಿಸಿ ಮಾಡಿಲ್ಲ. ಈ ಹಿಂದೆ ಕೇಂದ್ರ ಸಚಿವ ಸಿದ್ದೇಶ್ವರ್ ಮನೆ ಮೇಲೂ ದಾಳಿ ಆಗಿತ್ತು. ನಾವು ಆ ಸಂದರ್ಭದಲ್ಲಿ ಯಾರ ಮೇಲೂ ಆರೋಪ ಮಾಡಿರಲಿಲ್ಲ. ಎಸ್ ಎಂ ಕೃಷ್ಣ ಬಿಜೆಪಿ ಸೇರಿದ ಬಳಿಕ ಕಾಫಿ ಡೇ ಸಂಸ್ಥೆ ಮೇಲೆ ದಾಳಿ ಆಯ್ತು. ಈಗ ನಾವು ಯಾವ ರೀತಿಯ ರಾಜಕೀಯ ಬಣ್ಣ ಕಟ್ಟಬೇಕು. ಡಿಕೆ ಶಿವಕುಮಾರ್ ಮನೆ ದಾಳಿ ಆದ್ರೆ ರಾಜಕಾರಣ ಅಂತಾರೆ. ಜೆಡಿಎಸ್ ಬೆಂಬಲಿತ ಕಂಟ್ರಾಂಕ್ಟರ್ ದಾಳಿ ಆದ್ರೆ ರಾಜಕಾರಣ ಅಂತಾರೆ. ಇಷ್ಟಕ್ಕೂ ಪ್ರಾಮಾಣಿಕತೆಯಿಂದ ಮಾಡೋ ವ್ಯವಹಾರಕ್ಕೆ ಯಾವ ರೇಡ್ ಮಾಡಿದ್ರು ತೊಂದರೆ ಆಗಲ್ಲ. ತೊಂದರೆ ಆಗೋದು ತೆರಿಗೆ ವಂಚನೆ ಮಾಡಿದ್ರೆ, ಕಪ್ಪು ಹಣ ಇಟ್ಟಿದ್ರೆ. ತಪ್ಪು ಮಾಡಿದವರು ಮಾತ್ರ ಬಾಯಿ ಬಡಿದುಕೊಳ್ಳಬೇಕು. ಎತ್ತಿನ ಗಾಡಿಯ ಮೇಲೆ ಬಂದ ಜನ ಸಾವಿರ ಕೋಟಿ ಒಡೆಯರಾಗಿದ್ದಾರೆ. ಯಾವ ವ್ಯವಹಾರ ಆದ್ರು ನನಗೆ ಇರೋದು ನಾಲ್ಕು ಎಕರೆ ಜಮೀನು. ಬೆಂಗಳೂರಿನಲ್ಲಿ ಹತ್ತಾರು ಮನೆಗಳು, ನೂರಾರು ಕೋಟಿ ಹಣ, ಮಕ್ಕಳು ಮೊಮ್ಮಕ್ಕಳ ಹೆಸರಲ್ಲಿ ನೂರಾರು ಕೋಟಿ ಹಣ ಮಾಡ್ತಾರೆ. ಇದು ಯಾವ ವ್ಯವಹಾರ, ಇಂತಹ ವ್ಯವಹಾರ ಗೊತ್ತಾಗಬೇಕಿದೆ. ಈಗ ನಾನು ವ್ಯಕ್ತಿಗಳ ಹೆಸರು ಹೇಳಲ್ಲ. ವ್ಯವಹಾರ ಇಂದಿಗೆ ಒಂದು ರೋಲ್ ಮಾಡೆಲ್ ಆಗಲಿ. ಐಟಿ ರೇಡಿಗೆ ರಾಜಕಾರಣ ಬಣ್ಣ ಕಟ್ಟಿದ್ರೆ ಪ್ರಾಮಾಣಿಕತೆ ಹೇಗೆ ಹುಟ್ಟುತ್ತೆ. ಈ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲ. ಐಟಿ ಸಂಸ್ಥೆ ಬಿಜೆಪಿ ವಿಂಗ್ ಅಲ್ಲ, ಅದು ಸರ್ಕಾರ ಸ್ವಾಯತ್ತ ಸಂಸ್ಥೆ. ಕುಂಬಳ ಕಾಯಿ ಕಳ್ಳ ಅಂದ್ರೆ ಎಗಲು ಮುಟ್ಟಿಕೊಳ್ಳಬೇಡಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.