ಕಲಬುರಗಿ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಜ್ಯಾಧ್ಯಂತ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಚುನಾವಣೆಯಲ್ಲ. ದೇಶದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆ. ಮೋದಿ ನಾಯಕತ್ವದಲ್ಲಿ ರಕ್ಷಣೆ ಸಾಧ್ಯ ಎಂದು ಜನರು ಅರಿತಿದ್ದಾರೆ. ಸೂರ್ಯ-ಚಂದ್ರ ಎಷ್ಟು ಸತ್ಯವೋ, ಮೋದಿ ಪ್ರಧಾನಿ ಆಗುವುದು ಕೂಡಾ ಅಷ್ಟೇ ನಿಶ್ಚಿತ. ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಕಿಚಡಿ ಸರ್ಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.










