ಕುಮಾರಸ್ವಾಮಿ ಅವರ ಹೇಳಿಕೆಯಿಂದ ಸೇನಾಧಿಕಾರಿಗಳಿಗೆ ಅಪಮಾನ ಮಾಡಿದಂತಾಗಿದೆ : ಆರ್. ಅಶೋಕ್…

185
firstsuddi

ಮಂಗಳೂರು : ಪುಲ್ವಾಮ ದಾಳಿ ಬಗ್ಗೆ ನನಗೆ ಎರಡು ವರ್ಷಗಳ ಹಿಂದೆಯೇ ಸೇನಾಧಿಕಾರಿಗಳು ನನಗೆ ಹೇಳಿದ್ದರು
ಎಂಬ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಡಿಸಿಎಂ ಆರ್. ಅಶೋಕ್ ಅವರು ಪುಲ್ವಾಮ ದಾಳಿ ಆಗುತ್ತದೆ ಎಂದು ನನಗೆ 20 ವರ್ಷ ಹಿಂದೆಯೇ ಸೇನಾಧಿಕಾರಿಗಳು ಹೇಳಿದ್ದರು. ಶಾಸ್ತ್ರ, ಜ್ಯೋತಿಷ್ಯ ಹಾಗೂ ರೇವಣ್ಣನ ನಿಂಬೆಹಣ್ಣು ಜಾತಕ ಯಾವುದು ಇಲ್ಲಿ ನಡೆಯುವುದಿಲ್ಲ. ಯಾವುದೇ ರಕ್ಷಣಾಧಿಕಾರಿಗಳು ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಸೇನಾಧಿಕಾರಿಗಳಿಗೆ ಅಪಮಾನ ಮಾಡಿದಂತಾಗಿದೆ. ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಪ್ರಚಾರ ಮಾಡಿದರೂ ಏನೂ ಪ್ರಯೋಜನವಿಲ್ಲ. ಮೇ 23 ರ ನಂತರ ಕಾಂಗ್ರೆಸ್‍ಗೆ ಏನು ಮಾಡ್ತೀನಿ ನೋಡಿ ಎಂದು ಹೆಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ. ಇದೆಲ್ಲ ನೋಡಿದರೆ ಕಾಂಗ್ರೆಸ್-ಜೆಡಿಎಸ್ ಗೊಂದಲದ ಗೂಡಾಗಿದೆ ಎಂದಿದ್ದಾರೆ.