ಮೇ 23ರ ಚುನಾವಣೆ ಫಲಿತಾಂಶದ ನಂತರ ಸರ್ಕಾರದಲ್ಲಿ ಬಹಳ ಬದಲಾವಣೆ ಆಗಲಿದೆ : ರಮೇಶ್ ಜಾರಕಿಹೊಳಿ…

185
firstsuddi

ಬೆಳಗಾವಿ : ಕರ್ನಾಟಕ ಹಾಲು ಒಕ್ಕೂಟದ ನೂತನ ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ ಅವರು ಕೆಎಂಎಫ್ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲರ ಆಶೀರ್ವಾದ ಇದೆ. ಕೆಎಂಎಫ್ ಚುನಾವಣೆ ಅಂದರೆ ಎಂಎಲ್ಎ ಚುನಾವಣೆ ಇದ್ದ ಹಾಗೆ. ಅದಕ್ಕೆ ನೀವು ಸಹಕಾರ ಕೊಡಬೇಕು. ಮೇ 23ರ ಚುನಾವಣೆ ಫಲಿತಾಂಶದ ನಂತರ ಸರ್ಕಾರದಲ್ಲಿ ಬಹಳ ಬದಲಾವಣೆ ಆಗಲಿದೆ. ಉನ್ನತ ಸ್ಥಾನದಲ್ಲಿರುವ ಎಲ್ಲಾ ಸಚಿವರು ಮಾಜಿ ಸಚಿವರಾಗುತ್ತಾರೆ. ಕೆಂಪು ದೀಪ ಉರಿಯುವ ಕಾರಿನಲ್ಲಿ ಸುತ್ತಾಡುವ ಸಚಿವರುಗಳನ್ನು ನೋಡಿ ಯಾರೂ ಕೂಡ ಹೆದರಬೇಕಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ನಮಗೆ ಅಧಿಕಾರ ಬರುತ್ತದೆ. ವಿಶ್ವಾಸ ದ್ರೋಹ, ಬೆನ್ನಿಗೆ ಚೂರಿ ಹಾಕುವ ಮಂದಿಯನ್ನು ನಂಬಬೇಡಿ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.