ಚಿಕ್ಕಮಗಳೂರು : ಸಂಸದೆ ಶೋಭ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಸೀರೆ, ಬಳೆ, ಪ್ಯಾಂಟ್, ಹಾಗೂ ಶರ್ಟ್‍ನ್ನು ಗಿಫ್ಟ್ ಆಗಿ ನೀಡಿದ್ದು, ಶೋಭ ಕರಂದ್ಲಾಜೆ ಅವರು ಹೆಣ್ಣೋ-ಗಂಡೋ ಎಂಬುವುದನ್ನು ಅವರೇ ತೀರ್ಮಾನಿಸಲಿ. ಹೆಣ್ಣಾದರೆ ಸೀರೆ, ಬಳೆಯನ್ನು ಹಾಕಲಿ, ಗಂಡಾದರೆ ಪ್ಯಾಂಟ್ ಶರ್ಟ್ ಹಾಕಲಿ ಎಂದು ಶೋಭ ಕರಂದ್ಲಾಜೆ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಕೂಡಲೇ ಶೋಭ ಕರಂದ್ಲಾಜೆ ಅವರು ಸಿದ್ದರಾಮಯ್ಯ ಅವರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಶೋಭ ಕರಂದ್ಲಾಜೆ ಅವರ ಹೇಳಿಕೆ ಸ್ತ್ರೀ ಕುಲಕ್ಕೆ ಮಾಡಿದ ಅವಮಾನವಾಗಿದ್ದು, ಅವರು ನಾನು ಹೆಣ್ಣೆಂಬುದನ್ನೇ ಮರೆತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









