ಕೊಟ್ಟಿಗೆಹಾರ : ಸಮೀಪದ ತರುವೆಯ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಸುಗ್ಗಿ ಹಬ್ಬದ ಹಗಲುಸುಗ್ಗಿ ಉತ್ಸವ ಶುಕ್ರವಾರ ಸಂಪನ್ನಗೊಂಡಿತು.
ಕಳೆದ ಶನಿವಾರದಿಂದ ಪ್ರಾರಂಭವಾದ ಸುಗ್ಗಿಹಬ್ಬವೂ 9 ದಿನಗಳ ಕಾಲ ನಡೆದಿದ್ದು ಏಳನೇ ದಿನವಾದ ಶುಕ್ರವಾರ ತರುವೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದಿಯನ್ನು ಹೊತ್ತು ಮಕ್ಕಿಗದ್ದೆಯಲ್ಲಿ ಹಗಲು ಸುಗ್ಗಿ ಉತ್ಸವವನ್ನು ಸಂಭ್ರಮ ಸಡಗರದಿಂದ ನಡೆಸಲಾಯಿತು.
ತರುವೆ, ಬಿನ್ನಡಿ, ಅತ್ತಿಗೆರೆ, ದ್ಯಾವನಗೂಲ್, ಬಣಕಲ್, ಹೆಗ್ಗುಡ್ಲು, ದೊಡನಂದಿ ಸುತ್ತಮುತ್ತಲ್ಲಾ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರಾದ ರಾಮಚಂದ್ರಗೌಡ, ಗೋಪಾಲಗೌಡ, ದೊಡ್ಡಮನೆ ಲಕ್ಷ್ಮಣಗೌಡ, ಗಜೇಂದ್ರೆಗೌಡ, ನರೇಂದ್ರಗೌಡ, ಉಪೇಂದ್ರೆಗೌಡ, ಲಕ್ಷ್ಮಣಗೌಡ, ಆದರ್ಶತರುವೆ, ನಾರಾಯಣಗೌಡ, ಲಕ್ಷ್ಮಣಾಚಾರ್, ಸುನೀಲ್, ಪ್ರಶಾಂತ್, ವಿಜಯ್, ಅರವಿಂದ್, ದಿವಾಕರ್ ಕಾರಂತ್ ಮೊದಲಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ತರುವೆಯ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಸುಗ್ಗಿ ಹಬ್ಬದ ಹಗಲುಸುಗ್ಗಿ ಉತ್ಸವ ಶುಕ್ರವಾರ ಸಂಪನ್ನಗೊಂಡಿತು…










