ಮೂಡಿಗೆರೆ: ಪಟ್ಟಣ ಪಂಚಾಯಿತಿ ಚುನಾವಣೆಯ ಇನ್ನೇನು ಎರಡೇ ದಿನ ಬಾಕಿ ಇದ್ದಂತೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದು, ಬಹಿರಂಗ ಪ್ರಚಾರ ಈಗಾಗಲೇ ಕೊನೆಗೊಂಡಿದ್ದು, ಅಭ್ಯರ್ಥಿಗಳು ಒಂದೊಂದು ಮತಧಾರರನ್ನು ಹುಡುಕಿ ವೈಯಕ್ತಿಕವಾಗಿ ಸಂಪರ್ಕಿಸಿ ಅವರನ್ನು ಮನವೊಲಿಸುವ ಕಸರತ್ತು ನಡೆಸುತ್ತಿರುವುದು ಒಂದು ರೀತಿಯಾದರೆ ಇನ್ನುಳಿದ ಅಭ್ಯರ್ಥಿಗಳಿಗೆ ಏನಾಗಬಹುದೋ ಎಂಬಂತಹ ಆತಂಕ ಸೃಷ್ಟಿಯಾಗಿದೆ.
ಈ ಹಿಂದೆ ಪಟ್ಟಣದ ಕೆಲವು ವಾರ್ಡ್ಗಳನ್ನು ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಿದ್ದರೂ ಆದರೆ ಪಂಚಾಯಿತಿ ಚುನಾವಣೆ ನಿಗದಿಯಾದ ದಿನಾಂಕ ಹಾಗೂ ಮತ್ತು ಲೋಕಸಭೆ ಚುನಾವಣೆ ಪಲಿತಾಂಶ ಚುನಾವಣೆ ಹೊಸ್ತಿಲಲ್ಲೇ ಹೊರಬಂದಿದ್ದರಿಂದ ಇದರಿಂದ ಬಿ.ಜೆ.ಪಿ ಅಭ್ಯರ್ಥಿಗಳಿಗೆ ಕೊಂಚ ಪಂಚಾಯಿತಿ ಸಮರದಲ್ಲಿ ವಿಜಯಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದರೂ ಈ ಭಾರಿ ಘಟಾನುಘಟಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಇದರಿಂದ ಇಲ್ಲಿ ಪಕ್ಷವನ್ನು ಬಿಟ್ಟು ಕೇವಲ ಅಭ್ಯರ್ಥಿಗಳ ಹಿನ್ನಲೆಯೇ ವಿಜಯದ ಮಾನದಂಡವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದು, ಆದರೂ ಕೆಲವರಿಗೆ ಪಕ್ಷದಲ್ಲಿ ಟಿಕೇಟ್ ನೀಡದ ಕಾರಣ ಪಕ್ಷೇತರವಾಗಿ ಕೆಲವು ಅಭ್ಯರ್ಥಿಗಳು ಅದರಲ್ಲಿಯೂ ವಿಷೇಶವಾಗಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಗಳು ಕಣಕ್ಕಿಳಿದ ಕಾರಣ ಬಿ.ಜೆ.ಪಿ. ಹಾಗೂ ಕಾಂಗ್ರೇಸ್ ನಂತಹ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ.
ತ್ರಿಕೋನ ಸ್ಪರ್ದೆಗಳು ಕೆಲವೆಡೆ ಏರ್ಪಟ್ಟಿದ್ದು ಅದರಲ್ಲಿ ಪ್ರಮುಖವಾಗಿ ಜೆ.ಎಂ ರಸ್ತೆಯ ವಾರ್ಡ್ ಸಂಖ್ಯೆ: 09, ಮತ್ತು 10 ರಲ್ಲಿ ಪಕ್ಷದ ಟಿಕೇಟ್ ವಂಚಿತರು ಪಕ್ಷೇತರವಾಗಿ ಸ್ಪರ್ಧಿಸಿದ್ದು, ಇದರಿಂದ ಮತದಾರರು ಯಾರಿಗೆ ಮತವನ್ನು ಹಾಕಲಿ ಯಾರನ್ನು ಬಿಡಲಿ ಎಂಬಂತಹ ಗೊಂದಲಗಳು ಸೃಷ್ಟಿಯಾಗಿದ್ದು ಇದಲ್ಲದೇ ಕಾಂಗ್ರೆಸಿನಲ್ಲಿ ಅಲ್ಷಸಂಖ್ಯಾತ ಮಹಿಳೆಗೆ ವಾರ್ಡ್ ಸಂಖ್ಯೆ:10 ರಲ್ಲಿ ಈ ಭಾರಿ ಸ್ಪರ್ದಿಸುವ ಅವಕಾಶ ಸಿಕ್ಕಿದ್ದು ಅದೂ ಅಲ್ಲದೇ ಪಕ್ಷೇತರವಾಗಿ ಇದೇ ವಾರ್ಡಿನಲ್ಲಿ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಬಾರಿ ಪೈಪೋಟಿ ನೀಡುತ್ತಿದ್ದು ಇವರಲ್ಲಿ ಯಾರನ್ನು ಆರಿಸಲಿ ಎಂಬಂತಹ ಗೊಂದಲ ಮತದಾರ ಪ್ರಭುವಿನಲ್ಲಿ ಏರ್ಪಟ್ಟಿದ್ದು ಇದಲ್ಲೆದರ ಮದ್ಯೆ ಧೀರ್ಘ ಸಮಯದಿಂದ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಹಿಡಿಯಲು ವಿಫಲವಾಗಿರುವ ಬಿ.ಜೆ.ಪಿ ಈ ಭಾರಿ ಲೋಕಸಮರದಲ್ಲಿ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಪ್ರಚಂಡ ಬಹುಮತದೊಂದಿಗೆ ಬಿ.ಜೆ.ಪಿ ಮತ್ತೆ ಕೇಂದ್ರವನ್ನು ತನ್ನಲ್ಲೇ ಉಳಿಸಿಕೊಂಡಿದ್ದು ಇದರ ಪರಿಣಾಮ ಇಲ್ಲಿನ ಪಂಚಾಯಿತಿ ಸಮರದಲ್ಲಿ ಬಿಜೆಪಿಗರೇ ತನ್ನ ಬಲವನ್ನು ಎತ್ತಿತೋರಿಸುತ್ತಾರ ಎಂದು ಕಾದು ನೋಡಬೇಕಾಗಿದೆ.
ಪಟ್ಟಣ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾದ ದಿನದಿಂದ ಹಲವಾರು ಅಭ್ಯರ್ಥಿಗಳು ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾದರು ಕೆಲವು ನಾಯಕರ ಮಧ್ಯಪ್ರವೇಶದಿಂದ ಕೆಲವರು ಅವರ ನಾಮಪತ್ರವನ್ನು ಹಿಂಪಡೆದು ಅದರಲ್ಲಿ ಈಗ ಒಟ್ಟು 37 ಅಭ್ಯರ್ಥಿಗಳಲ್ಲಿ 11 ಕಾಂಗ್ರೆಸ್, 11 ಬಿ.ಜೆ.ಪಿ, 8 ಜೆ.ಡಿ.ಎಸ್, 7 ಪಕ್ಷೇತರವಾಗಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅದರಲ್ಲಿ ಪಕ್ಷೇತರ ಅಭ್ಯರ್ಥಿಗಳು ಈ ಭಾರಿ ಹೇಗಾದರೂ ವಿಜಯವನ್ನು ಸಾಧಿಸಬೇಕೆಂದು ಪಣತೊಟ್ಟಿದ್ದು ಮತದಾರರು ಈ ಹಿಂದೆಯಂತೆ ಕೆಲವೊಂದು ವಾರ್ಡಿನ ಭದ್ರಕೋಟೆಯಂತಿರುವ ಕಾಂಗ್ರೆಸ್ ಅಥವಾ ಬಿ.ಜೆ.ಪಿಯನ್ನು ಕೈ ಹಿಡಿಯುತ್ತಾರೋ ಅಥವಾ ಟಿಕೇಟ್ ವಂಚಿತರಿಗೆ ಮತಧಾರ ಪ್ರಭು ಸಿಂಪತಿಯ ಮತವನ್ನು ಕೊಟ್ಟು ಹೊಸಬರಿಗೆ ಅವಕಾಶವನ್ನು ಈ ಬಾರಿ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕೊಡುತ್ತಾರೋ ಎಂದು ಕಾದು ನೋಡಬೇಕಾಗಿದೆ.










