ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ : ಬಸವರಾಜ ಬೊಮ್ಮಾಯಿ.

327
firstsuddi

ಕಲಬುರಗಿ : ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಅನರ್ಹ ಶಾಸಕರ ಕಾನೂನಾತ್ಮಕ ವಿಚಾರ ಇಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಅನರ್ಹರಾಗಿರುವ ಎಲ್ಲಾ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಔರಾದ್ಕರ್ ವರದಿಯನ್ನು ಸ್ಟೇಟ್ ಪೇ ಕಮಿಷನ್ ಕೆಲವೊಂದನ್ನು ಒಪ್ಪಿದೆ. ಕೆಲವೊಂದು ಒಪ್ಪಿಲ್ಲ. ಈ ಹಿಂದೆ ಜೈಲ್ ಮತ್ತು ಫೈರ್ ಇಲಾಖೆಗಳನ್ನು ವರದಿಯಿಂದ ಕೈಬಿಡಲಾಗಿತ್ತು. ನಾನು ಗೃಹ ಸಚಿವನಾದ ಬಳಿಕ ಎರಡು ಇಲಾಖೆಗಳನ್ನು ವರದಿಯಲ್ಲಿ ಸೇರಿಸಿದ್ದೇನೆ. ಹೀಗಾಗಿ ಯಾವ ರೀತಿ ಸ್ಕೇಲ್‍ಗಳನ್ನು ಕೊಡಬೇಕು ಎಂದು ಗೃಹ ಮತ್ತು ಹಣಕಾಸು ಇಲಾಖೆಗಳ ಮಧ್ಯೆ ಸಭೆ ನಡೆದಿದ್ದು, ಶೀಘ್ರವೇ ಅಂತಿಮ ನೋಟಿಫಿಕೇಶನ್‍ನ್ನು ಹೊರಡಿಸಿ, ಔರಾದ್ಕರ್ ವರದಿಯನ್ನು ಜಾರಿ ಮಾಡುತ್ತೇವೆ ಎಂದರು.