ಮದುವೆ ದಿನ ಹತ್ತಿರವಾಗುತ್ತಿದ್ದಂತೆ ನಿಮಗೆ ಪಿರಿಯಡ್ಸ್ ಆತಂಕ ಕಾಡುತ್ತಿದೆಯಾ ?

894

ಫಸ್ಟ್ ಸುದ್ದಿ : ಮದುವೆಯೆಂದು ಮನುಷ್ಯರ ಪ್ರತಿಯೊಬ್ಬರ ಬದುಕಿನಲ್ಲಿಯೂ ಬಹಳ ಪ್ರಮುಖವಾದದ್ದು, ಈ ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಮದುವೆಯ ಹೆಣ್ಣೀಗೂ ಆತಂಕವೊಂದು ಕಾಡುವುದಕ್ಕೆ ಶುರುವಾಗುತ್ತೆ. ಅದುವೇ ಪಿರಿಯಡ್ಸ್ ಭಯ. ಹೌದು ಮದುವೆ ದಿನ ಹತ್ತಿರ ಬರುತ್ತಿದೆ ಹಾಗೂ ಪಿರಿಯಡ್ಸ್‌ ದಿನವೂ ಹತ್ತಿರ ಬರುತ್ತಿದ್ದರೆ ಅನೇಕ ಮಹಿಳೆಯರಿಗೆ ಚಿಂತೆ ಕಾಡುತ್ತದೆ. ಪಿರಿಯಡ್ಸ್‌ನ್ನು ಮುಂದೆ ಹಾಕುವುದು ಹೇಗೆ ಎಂಬ ಟೆನ್ಷನ್ ಉಂಟಾಗುತ್ತದೆ. ಇನ್ನು ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಇದು ಮಹಿಳೆಯ ದೇಹದ ಮೇಲೆ ಪರಿಣಾಮವನ್ನು ಭೀರುವ ಸಾಧ್ಯತೆಗಳಿರುತ್ತವೆ. ಅದಕ್ಕಿಂತ ಉತ್ತಮವಾಗಿ, ನೈಸರ್ಗಿಕವಾಗಿಯೇ ಪಿರಿಯಡ್ಸ್ ನ್ನು ಮುಂದೆ ಹಾಕಬಹುದು. ಅದು ಹೇಗೆ, ಅದಕ್ಕೆ ಯಾವ ವಿಧಾನಗಳನ್ನು ಅನುಸರಿಸಬೇಕೆಂಬುದರ ಮಾಹಿತಿ ಇಲ್ಲಿದೆ ನೋಡಿ..

  • ಯಾವ ಕೆಲಸದಿಂದ ಸ್ಟ್ರೆಸ್‌ ಉಂಟಾಗುತ್ತದೆ ಆ ಕೆಲಸವನ್ನು ಮಾಡಿ, ಅಲ್ಲದೆ ಮೆದುಳಿಗೆ ಒತ್ತಡ ಬೀಳುವಂತಹ ಕೆಲಸ ಮಾಡಿ. ಯಾಕೆಂದರೆ ಸ್ಟ್ರೆಸ್‌ ತೆಗೆದುಕೊಳ್ಳುವುದರಿಂದ ಹಾರ್ಮೋನ್‌ ಪರಿವರ್ತನೆಯಾಗುತ್ತದೆ. ಇದು ಪಿರಿಯಡ್ಸ್‌ನ್ನು ಹಿಂದೆ ಮುಂದೆ ಮಾಡುತ್ತದೆ. ಪ್ರಮುಖವಾಗಿ ಮಾನಸಿಕವಾಗಿ ಸದೃಢವಾಗಿದ್ದಲ್ಲಿ ಮಾತ್ರ ಸಾಕು.
  • ತುಂಬಾ ಸಮಯದವರೆಗೆ ವ್ಯಾಯಾಮ ಮಾಡುವುದು ಸೂಕ್ತ. ನೀವು ವ್ಯಾಯಾಮ ಮಾಡುವ ಸಮಯವನ್ನು ಎಕ್ಸ್ಟೆಂಡ್‌ ಮಾಡಿ. ಯಾವುದಾದರು ಆಟವಾಡುವ ಆಸಕ್ತಿ ಇದ್ದರೆ ದಿನದಲ್ಲಿ ಅರ್ಧ ಗಂಟೆ ಆಟವಾಡಿ. ವ್ಯಾಯಾಮ ಹೆಚ್ಚು ಮಾಡುವುದರಿಂದಲೂ ಕೂಡಾ ದಿನಾಂಕವನ್ನು ಹಿಂದು ಮುಂದು ಮಾಡಬಹುದು.
  • ಇನ್ನು ನಾವು ನಿತ್ಯ ಸೇವಿಸುವ ಆಹಾರ ಪದ್ದತಿಯಿಂದಲೂ ಕೂಡಾ ಒಂದು ಪ್ರಯತ್ನವನ್ನು ಮಾಡಬಹುದು. ಮಸಾಲೆ ಪದಾರ್ಥಗಳನ್ನು ತಿನ್ನದೇ ಇರುವುದು ಒಳ್ಳೆಯದು. ಮಸಾಲೆ ಪದಾರ್ಥಗಳು ಹೊಟ್ಟೆಯಲ್ಲಿ ಬಿಸಿಯಾಗುತ್ತದೆ. ಇದರಿಂದ ಪಿರಿಯಡ್ಸ್‌ ಬೇಗನೆ ಆಗುತ್ತದೆ. ಆದುದರಿಂದ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಬೆಳ್ಳುಳ್ಳಿ, ಶುಂಠಿ, ಮೆಣಸು, ಕರಿಮೆಣಸು ಮೊದಲಾದವುಗಳಿಂದ ದೂರವಿರಿ.
  • ವಿನೆಗರ್‌ ನಿಮ್ಮ ಪಿರಿಯಡ್ಸ್‌ ಡೇಟ್‌ ಬೇಗನೆ ಆಗುವಂತೆ ಮಾಡುತ್ತದೆ. ಒಂದು ಗ್ಲಾಸ್‌ ನೀರಿನಲ್ಲಿ 3-4 ಚಮಚ ವಿನೆಗರ್‌ ಬೆರೆಸಿ ದಿನದಲ್ಲಿ 3-4 ಬಾರಿ ಸೇವಿಸಿ. ಹಳದಿ, ಅನನಾಸು, ಪಪ್ಪಾಯಿ, ಕ್ಯಾರೆಟ್‌,, ದಾಳಿಂಬೆ, ಎಳ್ಳು, ಖರ್ಜೂರ, ಬೆಲ್ಲ, ಓಂ ಕಾಳು, ಕೆಂಪು ಮಾಂಸ ಡಾರ್ಕ್‌ ಚಾಕಲೇಟ್ ಸೇವನೆ ಮಾಡಬೇಡಿ.
  • ಕಡ್ಲೆ ಬೇಳೆಯಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ ಇದನ್ನು ಸೇವಿಸುವುದರಿಂದ ಪಿರಿಯಡ್ಸ್‌ ದೂರ ಮಾಡುತ್ತದೆ. ಅದಕ್ಕಾಗಿ ನೀವು ಸ್ವಲ್ಪ ಬೇಳೆಯನ್ನು ತೆಗೆದುಕೊಂಡು ಫ್ರೈ ಮಾಡಿ ನಂತರ ಅದನ್ನು ಮಿಕ್ಸಿ ಮಾಡಿ ಪುಡಿ ಮಾಡಿಕೊಳ್ಳಿ. ಈ ಪುಡಿಯಿಂದ ಸೂಪ್‌ ಮಾಡಿ ಸೇವಿಸಿ. ಇದರಲ್ಲಿ ಬಿಸಿ ನೀರು ಮಿಕ್ಸ್‌ ಮಾಡಿ ಕುದಿಸಿ, ಮುಂದಿನ ಪಿರಿಯಡ್ಸ್‌ ಆಗುವ ದಿನದ ಏಳು ದಿನದ ಮೊದಲು ಇದನ್ನು ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆ ಸೇವಿಸಿದರೆ ಉತ್ತಮ.
  • ಪಾರ್ಸ್ಲೇ ಎಲೆಗಳು ಒಂದು ವಿದೇಶಿ ಸೊಪ್ಪಾಗಿದೆ. ಇದು ಭಾರತದಲ್ಲೂ ದೊರೆಯುತ್ತದೆ. ಒಂದು ಮುಷ್ಟಿ ಪಾರ್ಸ್ಲೇ ಎಲೆಗಳನ್ನು ತೆಗೆದುಕೊಂಡು 500 ಎಂಎಲ್‌ ನೀರಿನ ಜೊತೆ ಸೇರಿಸಿ ಕುದಿಸಿ. ನಂತರ ಅದಕ್ಕೆ ಜೇನು ಮಿಕ್ಸ್‌ ಮಾಡಿ ಕುಡಿಯಿರಿ. ಇಂತಹ ದಿನಗಳಲ್ಲಿ ಎರಡು ಮೂರು ಬಾರಿ ಸೇವಿಸಿ. ನಿಂಬೆ ನಿಮ್ಮ ಆಹಾರದಲ್ಲಿ ಸೇರಿಸಿ. ಇದರಿಂದ ಪಿರಿಯಡ್ಸ್ ಲೇಟ್‌ ಆಗಿ ಆಗುತ್ತದೆ. ಇದನ್ನು ನೀವು ನೀರಿನಲ್ಲಿ ಮಿಕ್ಸ್‌ ಮಾಡಿ ಕೂಡ ಸೇವಿಸಬಹುದು. ಆದರೆ ಇದರಿಂದ ಮುಂದಿನ ಪಿರಿಯಡ್ಸ್ ಸ್ವಲ್ಪ ಕಷ್ಟವಾಗುತ್ತದೆ.

LEAVE A REPLY

Please enter your comment!
Please enter your name here