ಬೆಂಗಳೂರು : ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಗಿಫ್ಟ್ ನೀಡಲಾಗಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತುಟ್ಟಿ ಭತ್ಯೆಯನ್ನು ಶೇ.4.35 ರಷ್ಟು ಹೆಚ್ಚಿಸಿದ್ದು, ಕಷ್ಟ ಪರಿಹಾರ ಭತ್ಯೆಯನ್ನು ನವೆಂಬರ್ 1ರಿಂದ ಅನ್ವಯವಾಗುವಂತೆ 1ಸಾವಿರ ರೂ ಹೆಚ್ಚಳ ಮಾಡಲಾಗಿದೆ. ರಾಜ್ಯ ಪೊಲೀಸರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿಯಂತಾಗಿದ್ದು, ಔರಾದ್ಕರ್ ವರದಿ ಜಾರಿಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಬೇಸರವಾಗಿದೆ. ಆದರೆ ಜಮೇದಾರ್, ಮುಖ್ಯ ಪೇದೆ, ಪೊಲೀಸ್ ಪೇದೆ, ಎಎಸ್ಐ ಹಾಗೂ ಎಸ್ಐಗಳಿಗೆ 1ಸಾವಿರ ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡುವ ಮೂಲಕ ಸ್ವಲ್ಪ ಮಟ್ಟಿಗೆ ಖುಷಿಪಡುವಂತಾಗಿದ್ದು, ಇನ್ನು ಮುಂದೆ ಹೊಸ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೂ 1ಸಾವಿರ ರೂ ಕಷ್ಟ ಪರಿಹಾರ ಭತ್ಯೆ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.










