ಎಲ್ಲಾ 17 ಕ್ಷೇತ್ರಗಳಲ್ಲೂ ನಾವೆ ಗೆಲ್ಲುತ್ತೇವೆ : ಬಿ.ಎಸ್. ಯಡಿಯೂರಪ್ಪ.

233
firstsuddi

ಬೆಂಗಳೂರು : ಅನರ್ಹ ಶಾಸಕರ ಕುರಿತು ಸುಪ್ರೀಂ ಆದೇಶಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ನಾಳೆಯಿಂದ ನಾವು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ಹಾಗೆಯೇ ಎಲ್ಲಾ 17 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದರು. ಇದೇ ವೇಳೆ ಅನರ್ಹ ಶಾಸಕರು ಬಿಜೆಪಿ ಸೇರುವ ವಿಷಯವಾಗಿ ಮಾತನಾಡಿದ ಅವರು, ಈ ಕುರಿತು ನಾನು ಅನರ್ಹ ಶಾಸಕರು ಹಾಗೂ ರಾಷ್ಟ್ರದ ನಾಯಕರೊಡನೆ ಚರ್ಚೆ ಮಾಡಿ ಸಂಜೆ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.