ಮೂಡಿಗೆರೆ : ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಎ.ಬಿ.ವಿ.ಪಿ ಪ್ರತಿಭಟನೆ…

974
firstsuddi

ಮೂಡಿಗೆರೆ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ ಹೈದರಾಬಾದ್‍ನಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ಆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮೂಡಿಗೆರೆ ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾರ್ಯದರ್ಶಿ ಸ್ವಾತಿ ಲೋಕುವಳ್ಳಿ ಅವರು ಈ ನೀಚ ಕೃತ್ಯವನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಯಾವಾ ಹೆಣ್ಣಿಗೂ ಈ ರೀತಿ ಆಗದಂತೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕ ದೀಕ್ಷಿತ್ ಮೂಡಿಗೆರೆ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಕೀರ್ತನ ಬೆಟ್ಟಗೆರೆ, ತಾಲ್ಲೂಕು ಸಂಚಾಲಕ ಕಾರ್ತಿಕ್ ಕುಂದೂರು, ಕೌಶಿಕ್ ಸಾರಗೋಡು, ಕಾರ್ತಿಕ್ ತಳವಾರ, ದೀಕ್ಷಿತ್ ಮೇಕನಗದ್ದೆ, ಶ್ರೀಜಿತ್ ಭಾರತಿಬೈಲ್, ವರ್ಷಿತ್ ಹೊಸಹಳ್ಳಿ, ಸುಕನ್ಯ, ಹೇಮಾ, ರಶ್ಮಿ, ಚೈತ್ರ, ರಾಹುಲ್, ಪರೀಕ್ಷಿತ್, ಶಾಶ್ವತ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.